Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿಯಲು ಇನ್ನು ಕೆಲವೇ ವಾರಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ಪೈಪೋಟಿ ನೀಡಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಫ್ಯಾಮಿಲಿ ವೀಕ್ ಮುಗಿಸಿರುವ ಕಂಟೆಸ್ಟೆಂಟ್ಗಳು ಸಕ್ಕತ್ ಜೋಶ್ ಪಡೆದು, ಹೊಸದಾದ ಗಟ್ಟಿ ನಿರ್ಧಾರಗಳನ್ನು ಮಾಡಿ ಹುರುಪಿನಿಂದ ಆಟ ಆಡುತ್ತಿದ್ದಾರೆ. ಈ ಬೆನ್ನಲ್ಲೇ ಬಿಗ್ ಬಾಸ್ ಮೇಲೆ ಗಂಭೀರವಾದ ಆರೋಪ ಒಂದು ಕೇಳಿಬಂದಿದೆ.
ಹೌದು, ಬಿಗ್ ಬಾಸ್(Bigg Boss) ಕನ್ನಡ ಸೀಜನ್ 11 ಫಿನಾಲೆ ಹತ್ತಿರ ಬರುತ್ತಿದ್ದಂತೆ ಬಿಗ್ ಬಾಸ್ ತಂಡ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ(Mokshita Pai)ಅವರನ್ನು ಮೂಲೆ ಗುಂಪು ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರ ಅಭಿಮಾನಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಫೋಟೋಗಳ ವೈರಲ್ ಆಗುತ್ತಿದ್ದು, ಬಿಗ್ ಬಾಸ್ ತಂಡ ಮೋಕ್ಷಿತಾ ಅವರನ್ನು ಬರಬರುತ್ತಾ ಕಡಿಮೆ ತೋರಿಸುತ್ತಿದ್ದಾರೆ.
ಅಂದಹಾಗೆ ಇತ್ತೀಚಿಗೆ ಪ್ರೋಮೋಗಳಲ್ಲಿ ಕೆಲವು ಸ್ಪರ್ಧಿಗಳನ್ನಷ್ಟೇ ಹೆಚ್ಚಾಗಿ ತೋರಿಸುತ್ತಿದ್ದು, ಮೋಕ್ಷಿತಾ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ವೀಕೆಂಡ್ ಸಂಚಿಕೆಯಲ್ಲೂ ಮೋಕ್ಷಿತಾ ಅವರನ್ನು ಸರಿಯಾಗಿ ತೋರಿಸುತ್ತಿಲ್ಲ. ಕಳೆದ ವಾರ ರಸಗುಲ್ಲಾ ಬಾಯಲ್ಲಿಟ್ಟು ಹಾಡುವ ಚಟುವಟಿಕೆಯಲ್ಲೂ ಮೋಕ್ಷಿತಾ ಅವರ ಭಾಗವನ್ನು ತೋರಿಸಿಲ್ಲ. ಇನ್ನು ಸಾಮಾನ್ಯವಾಗಿ ಕಿಚ್ಚ ಸುದೀಪ್ ಎಲ್ಲರೊಂದಿಗೂ ಮಾತನಾಡುತ್ತಾರೆ. ಬೇರೆ ಎಲ್ಲರ ಜೊತೆ ಮಾತನಾಡುವ ಕಂಟೆಂಟ್‌ಗಳನ್ನು ತೋರಿಸುವ ಬಿಗ್ ಬಾಸ್ ತಂಡ, ಮೋಕ್ಷಿತಾ ಅವರ ಜೊತೆಗಿನ ಸಂವಾದವನ್ನೇ ವೀಕ್ಷಕರಿಗೆ ತೋರಿಸುತ್ತಿಲ್ಲ ಎಂದೆಲ್ಲಾ ಮೋಕ್ಷಿತಾ ಅಭಿಮಾನಿಗಳು ಬಿಗ್ ಬಾಸ್ ತಂಡದ ವಿರುದ್ಧ ಆರೋಪಿಸಿದ್ದಾರೆ. ಈ ಮೂಲಕ ಬೇರೊಬ್ಬ ಮಹಿಳಾ ಸ್ಪರ್ಧಿಯನ್ನು ಹೈಲೈಟ್ ಮಾಡಬೇಕು ಎನ್ನುವ ಉದ್ದೇಶದಿಂದ ಗೆಲುವಿನ ಓಟದಲ್ಲಿ ಇರುವ ಮೋಕ್ಷಿತಾ ಅವರನ್ನು ಮೂಲೆ ಗುಂಪು ಮಾಡುತ್ತಿದ್ದೆ ಎಂದು ಆರೋಪಿಸಿದ್ದಾರೆ.
