Bigg Boss-12 : ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ -12 (Bigg Boss Kannada 12) ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿ, ಇದೀಗ ಮತ್ತೆ ಓಪನ್ ಮಾಡಲಾಗಿದೆ. ಸ್ಪರ್ಧಿಗಳೆಲ್ಲರೂ ಮತ್ತೆ ಮನೆಗೆ ಮರಳಿದ್ದಾರೆ. ಬಿಗ್ ಬಾಸ್ ಮನೆಗೆ ಬೇಗ ಜಡಿದ ಹಿನ್ನೆಲೆಯಲ್ಲಿ ಒಂದು ದಿನ ಬಿಗ್ ಬಾಸ್ ಆಟವನ್ನು ಸ್ಥಗಿತ ಮಾಡಲಾಗಿತ್ತು. ಹಾಗಾದರೆ ಈ ಒಂದು ದಿನದ ನಷ್ಟ ಎಷ್ಟು ಗೊತ್ತಾ?
ಹೌದು, ಒಂದು ದಿನದ ಅಂತರದಲ್ಲಿ ಬಿಗ್ ಬಾಸ್ ಎಪಿಸೋಡ್‌ಗಳನ್ನು ಶೂಟ್ ಮಾಡಲಾಗುತ್ತಿತ್ತು. ಆದ್ರೀಗ ಒಂದು ದಿನ ಸ್ಥಗಿತಗೊಂಡಿದ್ದು, ಶೋ ಮೇಲೆ ದೊಡ್ಡ ಪರಿಣಾಮವನ್ನೇ ಬೀರಲಿದೆ. ಇದರೊಂದಿಗೆ ಬಿಗ್ ಬಾಸ್ ಕನ್ನಡದ ಒಂದು ಎಪಿಸೋಡ್‌ಗೆ ಎಷ್ಟು ಖರ್ಚಾಗುತ್ತೆ ಅನ್ನೋದನ್ನೂ ರಿವೀಲ್ ಮಾಡಿದ್ದಾರೆ. ಒಂದು ಎಪಿಸೋಡ್ ಪ್ರಸಾರ ಆಗಿಲ್ಲ ಅಂದರೆ, 30 ರಿಂದ 40 ಲಕ್ಷ ರೂಪಾಯಿ ನಷ್ಟ ಆಗುತ್ತೆ. ಜಾಹೀರಾತಿನಿಂದ ಬರುವ ಹಣ ಹಾಗೂ ಕಂಟೆಂಟ್‌ನಿಂದ ಬರುವ ಹಣ. ಹಾಗೇ ಪ್ರೊಡಕ್ಷನ್ ತಂಡ ಎಲ್ಲರಿಗೂ ಹಣವನ್ನು ಕೊಡಬೇಕಾಗುತ್ತೆ ಎನ್ನಲಾಗಿದೆ.
