Bigg Boss: ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗಡೆ ಕಳಿಸುವ ಸಂದರ್ಭದಲ್ಲಿ ರೂಲ್ಸ್ ಬುಕ್ ಅನ್ನೋ ಕೈಗೆ ಇಟ್ಟು ಅವುಗಳನ್ನು ಓದಿ ಅರ್ಥೈಸಿಕೊಂಡ ಬಳಿಕ ಒಳಗಡೆ ಕಳಿಸಿಕೊಡಲಾಗುತ್ತದೆ. ಅದರಲ್ಲಿ ನಾನಾ ರೀತಿಯ ರೂಲ್ಸ್ ರೆಗುಲೇಷನ್ಸ್ ಇದ್ದು ಅವುಗಳನ್ನೆಲ್ಲವನ್ನು ಸ್ಪರ್ಧಿಗಳು. ಅಲ್ಲದೆ ಮುಖ್ಯವಾಗಿ ಸಹಸ್ಪರ್ಧಿಗಳ ಮೇಲೆ ಯಾವುದೇ ರೀತಿಯ ಹಲ್ಲೆ ನಡೆಸಬಾರದು ಎಂಬುದನ್ನು ಕೂಡ ಅಲ್ಲಿ ಉಲ್ಲೇಖಿಸಲಾಗಿರುತ್ತದೆ. ಇದನ್ನು ಮೀರಿ ವರ್ತಿಸಿದವರಿಗೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡುತ್ತದೆ. ಅದರಲ್ಲಿ ರೆಡ್ ಕಾರ್ಡ್ ಕೊಡುವುದು ಕೂಡ ಒಂದು.
ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಇತರರ ಮೇಲೆ ಅಲ್ಲೇ ಮಾಡಿ ಅತಿರೇಕದ ವರ್ತನೆಯನ್ನು ತೋರಿದರೆ ಅವರಿಗೆ ರೆಡ್ ಕಾರ್ಡ್ ನೀಡಲಾಗುತ್ತದೆ. ಇದುವರೆಗೂ ಯಾವ ಬಿಗ್ ಬಾಸ್ ನಲ್ಲಿಯೂ ಕೂಡ ಈ ರೀತಿಯ ರೆಡ್ ಕಾರ್ಡ್ ಬಳಕೆ ಆಗಿರಲಿಲ್ಲ. ಆದರೆ ಇದೀಗ ಬಿಗ್ ಬಾಸ್ ಇತಿಹಾಸದಲ್ಲಿ ಮೊದಲೆಂಬಂತೆ ತಮಿಳು ಬಿಗ್ ಬಾಸ್ ನಲ್ಲಿ ಇಬ್ಬರು ಸ್ಪರ್ಧಿಗಳಿಗೆ ರೆಡ್ ಕಾರ್ಡ್ ಕೊಟ್ಟು ಮನೆಗೆ ಕಳುಹಿಸಲಾಗಿದೆ. ಹಾಗಿದ್ದರೆ ರೆಡ್ ಕಾರ್ಡ್ ಕೊಟ್ರೆ ಏನಿಲ್ಲ ಆಗುತ್ತೆ? ನೋಡೋಣ ಬನ್ನಿ
ಏನಿದು ರೆಡ್ ಕಾರ್ಡ್?:
ಬಿಗ್ ಬಾಸ್ ಶೋನಲ್ಲಿ ರೆಡ್ ಕಾರ್ಡ್ ಬಳಕೆ ಆಗಿರುವುದು ಕಡಿಮೆ. ಶೋ ನಿಯಮಗಳನ್ನು ಉಲ್ಲಂಘಿಸಿದವರಿಗೆ, ಸಹ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ಹಾಗೂ ನಿಂದನೀಯ ಮಾತುಗಳನ್ನು ಆಡಿದ ಸ್ಪರ್ಧಿಗಳ ವಿರುದ್ಧ ನಿರೂಪಕರು ರೆಡ್ ಕಾರ್ಡ್ ಬಳಸಬಹುದಾಗಿದೆ.
ರೆಡ್ ಕಾರ್ಡ್ ಪಡೆದ ಸ್ಪರ್ಧಿಗಳಿಗೆ ಯಾವುದೇ ರೀತಿಯಲ್ಲಿ ವೇದಿಕೆಗೆ ಬರುವ ಅವಕಾಶ ಇರುವುದಿಲ್ಲ. ಅವರು ಸೀದಾ ಮನೆಗೆ ಹೋಗುತ್ತಾರೆ. ಇನ್ನೊಂದು ಮಾಹಿತಿಯ ಪ್ರಕಾರ ಈ ಸ್ಪರ್ಧಿಗಳಿಗೆ ಸಂಭಾವನೆಯನ್ನೂ ನೀಡುವುದಿಲ್ಲವೆನ್ನಲಾಗಿದೆ. ಆದರೆ ಇದು ಅಧಿಕೃತವಾಗಿ ತಿಳಿದು ಬಂದಿಲ್ಲ.
ಅಷ್ಟಕ್ಕೂ ಆಗಿದ್ದೇನು?
ಕಳೆದ ವಾರ ತಮಿಳು ಬಿಗ್ ಬಾಸ್ ನಲ್ಲಿಟಿಕೆಟ್ ಟು ಫಿನಾಲೆ ಟಾಸ್ಕ್ ನಡೆಯಿತು. ಈ ಟಾಸ್ಕ್‌ನಲ್ಲಿ ಗೆದ್ದವರಿಗೆ ನೇರವಾಗಿ ಫೈನಲ್‌ಗೆ ಪ್ರವೇಶಿಸುವ ಅವಕಾಶ ನೀಡಲಾಗಿತ್ತು. ಈ ಟಿಕೆಟ್ ಟು ಫಿನಾಲೆಯ ಕೊನೆಯ ಟಾಸ್ಕ್ ಆಗಿ ಕಾರ್ ಟಾಸ್ಕ್ ಅನ್ನು ಇರಿಸಲಾಗಿತ್ತು. ಎಲ್ಲಾ 9 ಜನರು ಒಂದೇ ಕಾರಿನಲ್ಲಿ ಹತ್ತಬೇಕು. ಕೊನೆಯವರೆಗೂ ಅದರಲ್ಲಿಯೇ ಉಳಿಯುವವರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಟಾಸ್ಕ್ ಆರಂಭವಾದ ಸ್ವಲ್ಪ ಸಮಯದ ನಂತರ, ಪಾರ್ವತಿ ಮತ್ತು ಕಮ್ರುದ್ದೀನ್ ಒಬ್ಬೊಬ್ಬರಾಗಿ ಸ್ಪರ್ಧಿಗಳನ್ನು ಕೀಟಲೆ ಮಾಡಲು ಪ್ರಾರಂಭಿಸಿದರು. ಸಾಂಡ್ರಾ ಅವರನ್ನು ಕೂಡ ಟೀಕಿಸಲಾಯಿತು. ಸಾಂಡ್ರಾ ಶಾಂತವಾದರೂ, ಪಾರ್ವತಿ ಅವರನ್ನು ಹೇಗಾದರೂ ಮಾಡಿ ಕಾರಿನಿಂದ ಹೊರಗೆ ತಳ್ಳಲು ನಿರ್ಧರಿಸಿದರು. ಕಮ್ರುದ್ದೀನ್ ಸಹಾಯದಿಂದ ಕಾರಿನ ಬಾಗಿಲು ತೆರೆದು, ಕಾಲಿನಿಂದ ಸಾಂಡ್ರಾ ಒತ್ತಿ ಹೊರಗೆ ತಳ್ಳಿದರು. ಸಾಂಡ್ರಾ ತಲೆಕೆಳಗಾಗಿ ಬಿದ್ದಳು, ಇದರಿಂದಾಗಿ ಅವಳಿಗೆ ನೋವಾಯಿತು. ಇದರ ನಂತರ, ವಿನೋದ್, ಶಬರಿ ಮತ್ತು ವಿಕ್ರಮ್ ಕೆಳಗೆ ಬಂದು ಸಾಂಡ್ರಾಳನ್ನು ವೈದ್ಯರ ಬಳಿಗೆ ಕರೆದೊಯ್ದರು, ಟಾಸ್ಕ್ ಮುಗಿದರೂ ಪರವಾಗಿಲ್ಲ ಎಂದು ಹೇಳಿದರು. ಇದು ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
