Home » Kiccha sudeep: ಕಿಚ್ಚ ಸುದೀಪ್ ಇಲ್ಲದೆ ಬಿಗ್ ಬಾಸ್: ಮಗಳು ಸಾನ್ವಿ ಹೇಳಿದ್ದೇನು?!

Kiccha sudeep: ಕಿಚ್ಚ ಸುದೀಪ್ ಇಲ್ಲದೆ ಬಿಗ್ ಬಾಸ್: ಮಗಳು ಸಾನ್ವಿ ಹೇಳಿದ್ದೇನು?!

0 comments

Kiccha sudeep: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಕನ್ನಡ ಬಿಗ್ ಬಾಸ್ ನ್ನು ಎಲ್ಲರೂ ಇಷ್ಟಪಟ್ಟು ನೋಡುತ್ತಾರೆ. ವಿಶೇಷ ಅಂದ್ರೆ ಬಿಗ್ ಬಾಸ್ 11 ಸೀಸನ್‌ಗಳ ಸಾರಥಿ ಆಗಿರುವ ಸುದೀಪ್ ಇದೇ ನನ್ನ ಕೊನೆ ಸೀಸನ್‌ ಎಂದು ಪೋಸ್ಟ್ ಹಾಕಿದ್ದರು ಇದರಿಂದ ಬಹುತೇಕ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. 

ಹೌದು, ಬಹುತೇಕರು ಸುದೀಪ್ (Kiccha sudeep) ನನ್ನು ನೋಡಲೆಂದೆ ಬಿಗ್ ಬಾಸ್ ನೋಡುತ್ತಾರೆ. ಈಗಾಗಲೆ ಸುದೀಪ್ ಇಲ್ಲದೆ ಬಿಗ್ ಬಾಸ್ ನೋಡುವುದಿಲ್ಲ, ಸುದೀಪ್ ಇದ್ದರೆ ಕನ್ನಡ ಬಿಗ್ ಬಾಸ್ ನಡೆಯುತ್ತದೆ ಎಂದು ಹಲವರು ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲದೆ ಕನ್ನಡ ಪರ ಸಂಘನೆಗಳು ಹೋರಾಟ ಮಾಡಲು ಮುಂದಾಗಿದ್ದಾರೆ. ಅದಲ್ಲದೆ ಸುದೀಪ್‌ ಮಾಡಿರುವ ಪೋಸ್ಟ್‌ನ ಪುತ್ರಿ ಸಾನ್ವಿ ಶೇರ್ ಮಾಡಿದ್ದಾರೆ.

ಸಾನ್ವಿ ಹಾಕಿರುವ ಪೋಸ್ಟ್‌ನಲ್ಲಿ, ‘ನಿಮ್ಮ ಜರ್ನಿ ಬಗ್ಗೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಅಪ್ಪ. ನಿಮ್ಮಂತೆ ಈ ಕಾರ್ಯಕ್ರಮ ನಡೆಸಲು ಯಾರಿಗೂ ಸಾಧ್ಯವಿಲ್ಲ. ವೇದಿಕೆಯ ಮೇಲೆ ನಿಮ್ಮನ್ನು ನೋಡುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ, ಇಷ್ಟು ವರ್ಷ ಶೋ ನಡೆಸಿಕೊಟ್ಟ ರೀತಿ ಬಗ್ಗೆ ನನಗೆ ಖುಷಿ ಇದೆ. ದೊಡ್ಮನೆಗೆ ನೀವು ಹಾಕಿರುವ ಶ್ರಮವನ್ನು ಯಾರಿಂದಲೂ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಈ ಕಾರ್ಯಕ್ರಮ ಬಗ್ಗೆ ನಿಮಗಿದ್ದ ಕಾಳಜಿ ಮತ್ತು ಪ್ರೀತಿಯನ್ನು ನಾನು ಗೌರವಿಸುತ್ತೀನಿ. ನಿಮ್ಮ ಹೆಮ್ಮಯ ಮಗಳು ನಾನು’ ಎಂದು ಸಾನ್ವಿ ಪೋಸ್ಟ್ ಹಾಕಿದ್ದಾರೆ’ 

ಸದ್ಯ ಸುದೀಪ್ ಮುಂದಿನ ವರ್ಷದಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಕೈ ಬಿಡುವುದಾಗಿ ಪೋಸ್ಟ್ ಹಾಕುತ್ತಿದ್ದಂತೆ ಬಿಗ್ ಬಾಸ್ ಕೂಡ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಫೋನ್ ಮೂಲಕ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದು ಯಾವುದೇ ಟಾಸ್ಕ್‌ ನೀಡದೆ, ಮನೆಯಲ್ಲಿ ಯಾವುದೇ ತಪ್ಪುಗಳು ಆಗದಂತೆ ನೋಡಿಕೊಳ್ಳಲು ಕ್ಯಾಪ್ಟನ್‌ ಶಿಶಿರ್‌ನ್ನು ನೇಮಕ ಮಾಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮುಂದೆ ಯಾವ ಬದಲಾವಣೆ ಆಗಲಿದೆ ಎಂದು ಕಾದು ನೋಡಬೇಕಿದೆ. 

You may also like

Leave a Comment