Bihar Crime News: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು(Crime News)ವರದಿಯಾಗುತ್ತಲೇ ಇರುತ್ತವೆ. ಬಿಹಾರದಲ್ಲಿ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಹೋಗಿದ್ದ ಗ್ಯಾಂಗ್ಸ್ಟರ್ ಒಬ್ಬನನ್ನು ವೈದ್ಯರೇ(Doctor) ಹತ್ಯೆ(Murder Case)ಮಾಡಿದ ಘಟನೆ ವರದಿಯಾಗಿದೆ.
ಗ್ಯಾಂಗ್ಸ್ಟರ್ ಚಂದನ್ ಕುಮಾರ್ ಎಂಬಾತ ಚಿಕಿತ್ಸೆಗೆಂದು ರೂಪನಗರ ಗ್ರಾಮದ ರಿಯಾ ಆಸ್ಪತ್ರೆಗೆ ತೆರಳಿದ್ದನಂತೆ. ಈ ಸಂದರ್ಭ ಚಂದನ್ ಕುಮಾರ್ ಹಾಗೂ ವೈದ್ಯರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ಆತನನ್ನು ವೈದ್ಯರು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ಸೇರಿ ಹೊಡೆದು ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೈದ್ಯರು ಮತ್ತು ಇತರ ಸಿಬ್ಬಂದಿ ಹತ್ಯೆ ಮಾಡಲು ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಗ್ಯಾಂಗ್ಸ್ಟರ್ನನ್ನು ಕೊಲ್ಲಲು ಹರಿತವಾದ ವಸ್ತುಗಳನ್ನು ಬಳಕೆ ಮಾಡಿದ್ದರು. ಸದ್ಯ, ಹತ್ಯೆಯಲ್ಲಿ ಭಾಗಿಯಾದ ಆರೋಪಿ ವೈದ್ಯನನ್ನು ಅಜಿತ್ ಪಾಸ್ವಾನ್ ಎಂದು ಗುರುತಿಸಲಾಗಿದೆ.

ಗ್ಯಾಂಗ್ಸ್ಟರ್ ಚಿಕಿತ್ಸೆಗೆಂದು ಆಸ್ಪತ್ರೆಗೆ ಭೇಟಿ ನೀಡಿದಾಗ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದ್ದು,ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡಿದೆ ಎಂದು ತಿಳಿದುಬಂದಿದೆ. ಸದ್ಯ, ಪ್ರಕರಣದ ತನಿಖೆಗೆ ಡಿಎಸ್ಪಿ ಅಮಿತ್ ಕುಮಾರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು ಘಟನೆಯಲ್ಲಿ ಭಾಗಿಯಾಗಿರುವ ವೈದ್ಯರು ಹಾಗೂ ಕಾಂಪೌಂಡರ್ನನ್ನು ಬಂಧಿಸಲು ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ನಡುವೆ ವೈದ್ಯರು ಹತ್ಯೆ ಮಾಡಿದ ಹಿನ್ನೆಲೆ ಆಕ್ರೋಶಗೊಂಡ ಗ್ಯಾಂಗ್ಸ್ಟರ್ ಬೆಂಬಲಿಗರು ಆಸ್ಪತ್ರೆ ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ
ಇದನ್ನು ಓದಿ: HSRP Number Plate: ವಾಹನ ಮಾಲಿಕರೇ ಗಮನಿಸಿ- HSRP ನಂಬರ್ ಪ್ಲೇಟ್ ಅಳವಡಿಸಲು ಈ ದಿನವೇ ಡೆಡ್ ಲೈನ್ !! ಸರ್ಕಾರದಿಂದ ಘೋಷಣೆ
