Home » Bihar Election : 190 ಕ್ಷೇತ್ರಗಳಲ್ಲಿ NDA ಗೆ ಭರ್ಜರಿ ಮುನ್ನಡೆ!!

Bihar Election : 190 ಕ್ಷೇತ್ರಗಳಲ್ಲಿ NDA ಗೆ ಭರ್ಜರಿ ಮುನ್ನಡೆ!!

0 comments

Bihar Election : ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಎನ್.ಡಿ.ಎ ಮೈತ್ರಿಕೂಟ ಭರ್ಜರಿಯ ಮುನ್ನಡೆಯನ್ನು ಕಂಡುಕೊಂಡಿದೆ.

ಹೌದು, ಎನ್ ಡಿ ಎ ಕೂಟವು 186 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಇಂಡಿಯಾ ಮೈತ್ರಿಕೂಟ ಬರೀ 50ರ ಆಸುಪಾಸಿನಲ್ಲಿಯೇ ಆಟವಾಡುತ್ತಿದೆ. ಇನ್ನು ಐದು ಕ್ಷೇತ್ರಗಳಲ್ಲಿ ಇತರೆ ಮುನ್ನಡೆ ಕಾಯ್ದುಕೊಂಡಿದೆ.

ಒಟ್ಟು 243 ಕ್ಷೇತ್ರಗಳ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ 61 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಆರ್‌ಜೆಡಿ ಮತ್ತು ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಇವುಗಳೊಂದಿಗೆ ಚಿರಾಗ್ ಪಾಸ್ವಾನ್ ಅವರ ಎಲ್‌ಜಿಪಿ (ರಾಮ್‌ ವಿಲಾಸ್), ಜಿತನ್ ರಾಮ್ ಮಾಂಜಿ ಅವರ ಹಮ್‌ (ಎಸ್‌) ಮತ್ತು ಉಪೇಂದ್ರ ಕುಶ್ವಾ ಅವರ ರಾಷ್ಟ್ರೀಯ ಲೋಕ ಮೋರ್ಚಾ ಕೂಡಾ ಮುನ್ನಡೆಯೊಂದಿಗೆ ಖಾತೆಗಳನ್ನು ತೆರೆಯುವ ಉತ್ಸಾಹದಲ್ಲಿವೆ.

You may also like