Home » Bihar Election: ಬಿಹಾರ ಚುನಾವಣಾ ಪೂರ್ವ ರ್ಯಾಲಿ: ನಾರ್ವೆ, ಸಿಂಗಾಪುರದ ಜನಸಂಖ್ಯೆಗಿಂತ ಬಿಹಾರಕ್ಕೆ ಹೆಚ್ಚಿನ ಮನೆಗಳನ್ನು ನೀಡಲಾಗಿದೆ – ಪ್ರಧಾನಿ

Bihar Election: ಬಿಹಾರ ಚುನಾವಣಾ ಪೂರ್ವ ರ್ಯಾಲಿ: ನಾರ್ವೆ, ಸಿಂಗಾಪುರದ ಜನಸಂಖ್ಯೆಗಿಂತ ಬಿಹಾರಕ್ಕೆ ಹೆಚ್ಚಿನ ಮನೆಗಳನ್ನು ನೀಡಲಾಗಿದೆ – ಪ್ರಧಾನಿ

0 comments

Bihar Election: ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದ ಮೋತಿಹರಿಯಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಅವರು 7,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಆವಾಸ್ ಯೋಜನೆಯಡಿ ಸರ್ಕಾರ ನಾರ್ವೆ, ನ್ಯೂಜಿಲೆಂಡ್ ಮತ್ತು ಸಿಂಗಾಪುರದ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಮನೆಗಳನ್ನು ಬಿಹಾರಕ್ಕೆ ನೀಡಿದೆ ಎಂದರು.

“ನಾನು ಬಿಹಾರದ ನೆಲದಲ್ಲಿ ಆಪರೇಷನ್ ಸಿಂಧೂರ್ ನಿರ್ಣಯವನ್ನು ತೆಗೆದುಕೊಂಡೆ. ಇಂದು, ಇಡೀ ಜಗತ್ತು ಅದರ ಯಶಸ್ಸನ್ನು ವೀಕ್ಷಿಸುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದರು. “ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ನಾವು ನಾರ್ವೆ, ನ್ಯೂಜಿಲೆಂಡ್ ಮತ್ತು ಸಿಂಗಾಪುರದ ಸಂಪೂರ್ಣ ಜನಸಂಖ್ಯೆಗಿಂತ ಹೆಚ್ಚಿನ ಮನೆಗಳನ್ನು ಬಿಹಾರಕ್ಕೆ ನೀಡಿದ್ದೇವೆ” ಎಂದು ಅವರು ರ್ಯಾಲಿಯಲ್ಲಿ ಹೇಳಿದರು.

ತಮ್ಮ ಭಾಷಣಕ್ಕೂ ಮುನ್ನ, ಪ್ರಧಾನಿ ಮೋದಿ ಬಿಹಾರದಲ್ಲಿ ರೈಲು ಮತ್ತು ರಸ್ತೆ ಸಂಪರ್ಕವನ್ನು ಸುಧಾರಿಸುವುದರಿಂದ ಹಿಡಿದು ರಾಜ್ಯದಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಉತ್ತೇಜಿಸುವವರೆಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಅಲ್ಲದೆ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಿದರು. ಅವರ ಜೊತೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಉಪಸ್ಥಿತಿಯಿದ್ದರು.

ಇದನ್ನೂ ಓದಿ: Kharif crop: ಹಾರಂಗಿಯಿಂದ ಕಟ್ಟು ಪದ್ಧತಿಯಲ್ಲಿ ಖಾರೀಫ್ ಬೆಳೆಗೆ ನೀರು – ಮಳೆ ಅವಲಂಬಿತ ಅರೆ ಖುಷ್ಕಿ ಬೆಳೆಗಳನ್ನು ಮಾತ್ರ ಬೆಳೆಯಲು ಸೂಚನೆ

You may also like