Home » SHOCKING NEWS | 8 ನೇ ತರಗತಿ ಬಾಲಕಿ ಮೇಲೆ ಆಕೆಯ ಸಹಪಾಠಿಗಳಿಂದಲೇ ಅತ್ಯಾಚಾರ |ಅಷ್ಟರಲ್ಲಿ ಅಲ್ಲಿಗೆ ಬಂದ ಹೆಡ್ ಮಾಸ್ಟರ್ ಮಾಡಿದ್ದಾದರೂ ಏನು?

SHOCKING NEWS | 8 ನೇ ತರಗತಿ ಬಾಲಕಿ ಮೇಲೆ ಆಕೆಯ ಸಹಪಾಠಿಗಳಿಂದಲೇ ಅತ್ಯಾಚಾರ |ಅಷ್ಟರಲ್ಲಿ ಅಲ್ಲಿಗೆ ಬಂದ ಹೆಡ್ ಮಾಸ್ಟರ್ ಮಾಡಿದ್ದಾದರೂ ಏನು?

0 comments

ಅನಾದಿಕಾಲದಿಂದಲೂ ಹೆಣ್ಣು ಮಕ್ಕಳ ಮೇಲೆ ಶೋಷಣೆಗಳು ನಡೆಯುತ್ತಲೇ ಇದೆ. ಕಾಮ ಪಿಶಾಚಿಗಳ ಕ್ಷಣಿಕ ದೇಹ ಸುಖಕ್ಕೆ ಅದೆಷ್ಟೋ ಹೆಣ್ಣು ಮಕ್ಕಳ ಬಾಳೇ ಹಾಳಾಗಿದೆ. 6 ತಿಂಗಳ ಕೂಸನ್ನು ಬಿಡದೆ 60-70 ವರ್ಷದ ವೃದ್ಧೆಯರ ಮೇಲು ಅತ್ಯಾಚಾರವೆಂಬ ಕ್ರೌರ್ಯದ ಆಟವನ್ನು ನಡೆಸುತ್ತಾರೆ ಹಾಗೂ ಈಗಲೂ ನಡೆಸುತ್ತಿದ್ದಾರೆ. ದೇವರಾಗಿ ಬಂದು ಕಾಪಾಡಬೇಕಿದ್ದ ಗುರುವು ದೆವ್ವವಾಗಿ ವಿದ್ಯಾರ್ಥಿನಿಯ ಬಾಳಲ್ಲಿ ಆಟವಾಡಿದ್ದಾನೆ.

ಬಿಹಾರದಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದ್ದೂ ಪ್ರತಿದಿನ ಕಳ್ಳತನ, ಲೂಟಿ ಅಥವಾ ಅತ್ಯಾಚಾರಕ್ಕೆ ಸಂಬಂಧಿಸಿದ ಘಟನೆಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಪೋಷಕರನ್ನು ಬೆಚ್ಚಿ ಬೀಳಿಸಿದೆ.

ಬಿಹಾರದ 8ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ಹಾಗೂ ಸಹಪಾಠಿಗಳು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ವಿದ್ಯಾರ್ಥಿನಿಯು ಮಲವಿಸರ್ಜನೆಗೆ ಪೊದೆಗಳ ಬಳಿ ಹೋಗಿದ್ದಾಗ ಆಕೆಯ ಜೊತೆ ಓದುತ್ತಿದ್ದ ನಾಲ್ವರು ಹುಡುಗರು ಶಾಲೆಯ ಹಿಂದೆಯಿರುವ ನಿರ್ಜನ ಸ್ಥಳಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ. ಅಷ್ಟರಲ್ಲಿ ಏನೋ ಸದ್ದಾಯಿತೆಂದು ಅಲ್ಲಿಗೆ ಹೆಡ್ ಮಾಸ್ಟರ್ ಹೋದಾಗ ಅವರನ್ನು ಕಂಡ ಹುಡುಗರು ತಾವು ಸಿಕ್ಕಿಬೀಳುತ್ತೇವೆಂದು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.

ದೇವರಂತೆ ಬಂದು ಹೆಡ್ ಮಾಸ್ಟರ್ ತನ್ನನ್ನು ಕಾಪಾಡಿದರು ಎಂದು ನಿಟ್ಟುಸಿರು ಬಿಟ್ಟ ಬಾಲಕಿಗೆ ಮತ್ತೊಂದು ಶಾಕ್ ಕಾದಿತ್ತು. ಅಲ್ಲಿಗೆ ಬಂದು ನೋಡಿದ ಹೆಡ್‌ಮಾಸ್ಟರ್‌ ಅರೆ ಬರೆ ಬೆತ್ತಲೆಯಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ. ತಪ್ಪಿತಸ್ಥರನ್ನು ಹುಡುಕಿ ಶಿಕ್ಷಿಸುವ ಬದಲು ಆ ಹೆಡ್ ಮಾಸ್ಟರ್ ಕೂಡ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಇದಾದ ಬಳಿಕ ಆ ಬಾಲಕಿ ಅಳುತ್ತಾ ಮನೆಗೆ ಬಂದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದು, ಏನಾಯಿತೆಂದು ವಿಚಾರಿಸಿದಾಗ ಆಕೆಯ ಮೇಲೆ ನಡೆದ ಅತ್ಯಾಚಾರದ ಪ್ರಕರಣವು ಬೆಳಕಿಗೆ ಬಂದಿದೆ. ತಮ್ಮ ಮಗಳ ಮೇಲೆ ನಡೆದ ಈ ಕೃತ್ಯದ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗೂ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದೆ. ಈ ಪ್ರಕರಣದ ನಾಲ್ವರು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಾಲೆಯ ಹೆಡ್ ಮಾಸ್ಟರ್ ಸುರೇಂದ್ರ ಕುಮಾರ್ ಭಾಸ್ಕರ್ ಎಂಬುವವರನ್ನು ಬಂಧಿಸಲಾಗಿದೆ.

ಶಾಲೆಯಲ್ಲಿ ತಮ್ಮ ಮಕ್ಕಳಿಗೆ ರಕ್ಷಣೆ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಮಕ್ಕಳನ್ನು ಧೈರ್ಯವಾಗಿ ಶಾಲೆಗೆ ಕಳುಹಿಸುವ ಪೋಷಕರು ಇದೀಗ ಹೆಣ್ಣುಮಕ್ಕಳನ್ನು ಓದಲು ಕಲಿಸಲು ಕೂಡ ಹಿಂದೇಟು ಹಾಕುವ ಕೆಟ್ಟಪರಿಸ್ಥಿತಿ ನಿರ್ಮಾಣವಾಗಿದೆ.

You may also like

Leave a Comment