Bihar: ರೈಲ್ವೆ ನಿಲ್ದಾಣದಲ್ಲಿ ಯುವತಿ ಒಬ್ಬಳು ಭಿಕ್ಷೆ ಬೇಡುತ್ತಿರುವುದನ್ನು ಕಂಡು ಮರುಕಗೊಂಡ ಯುವಕ ಆಕೆಯನ್ನು ರಕ್ಷಿಸಿ ತಾನೇ ಮದುವೆಯಾಗಿರುವ ಅಚ್ಚರಿ ಘಟನೆ ಎಂದು ಬಿಹಾರದಲ್ಲಿ ನಡೆದಿದೆ.
ಹೌದು, ಬಿಹಾರದ ಬಕ್ಸಾರ್‌ನ ನಿವಾಸಿಯಾಗಿರುವ ಗೋಲು ಯಾದವ್ ರೈಲು ಪ್ರಯಾಣ ಮಾಡುವಾಗ ರೈಲಿನೊಳಗೆ ಯುವತಿಯೊಬ್ಬಳು ಭಿಕ್ಷೆ ಬೇಡುತ್ತಾ ಬಂದಿದ್ದಾಳೆ. ಯುವತಿ ಭಿಕ್ಷೆ ಕೇಳುವಾಗ ಕೆಲ ಪ್ರಯಾಣಿಕರು ಆಕೆಯನ್ನು ಬೇರೆ ನೋಟದಿಂದ ನೋಡಿದ್ದಾರೆ. ಇದನ್ನು ನೋಡಿದ ಗೋಲು ಮಾನವೀಯ ದೃಷ್ಟಿಯಿಂದ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಯುವತಿಯ ಬಳಿ ಹೋಗಿ ಆಕೆಯನ್ನು ಆ ಸ್ಥಳದಿಂದ ರಕ್ಷಿಸಿದ್ದಾನೆ.
ಯುವತಿಯ ಹಿನ್ನೆಲೆಯ ಬಗ್ಗೆ ಗೋಲು ಕೇಳಿದಾಗ ಯುವತಿ ಅನಾಥೆ ಎಂದು ಹೇಳಿದ್ದಾಳೆ. ಕೊನೆಗೆ ಆಕೆಯನ್ನು ಅಲ್ಲೇ ಬಿಟ್ಟು ಹೋಗುವುದು ಬೇಡ ಎಂದು ಅನ್ನಿಸಿದೆ. ಈ ಕಾರಣದಿಂದ ಮನೆಯವರಿಗೆ ಕರೆ ಮಾಡಿ ಯುವತಿಯ ಪರಿಸ್ಥಿತಿಯನ್ನು ಹೇಳಿದ್ದಾರೆ. ಇದರಿಂದ ಗೋಲು ಮನೆಯವರು ಕೂಡ ಯುವತಿಯನ್ನು ಮನೆಗೆ ಕರೆದುಕೊಂಡು ಬರಲು ಹೇಳಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಗೋಲು ಹೆತ್ತವರ ಒಪ್ಪಿಗೆಯೊಂದಿಗೆ, ಆ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಅದರಂತೆ ಗೋಲು ಯುವತಿಯನ್ನು ಮದುವೆ ಆಗಿದ್ದಾರೆ. ಈ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
