Home » Puttur: ಪುತ್ತೂರು: ಗ್ಯಾರೇಜ್‌ ನಿಂದ ಬೈಕ್ ಕಳ್ಳತನ!

Puttur: ಪುತ್ತೂರು: ಗ್ಯಾರೇಜ್‌ ನಿಂದ ಬೈಕ್ ಕಳ್ಳತನ!

by ಕಾವ್ಯ ವಾಣಿ
0 comments

Puttur: ಪುತ್ತೂರು (Puttur) ಸಮೀಪ ಹಾರಾಡಿಯ ಗ್ಯಾರೇಜ್‌ವೊಂದರಲ್ಲಿ ದುರಸ್ಥಿಗಾಗಿ ನಿಲ್ಲಿಸಿದ್ದ ಯಮಹಾ ಆರ್ ಎಕ್ಸ್ 100 ಬೈಕ್‌ನ್ನು ಗ್ಯಾರೇಜ್ ರೋಲಿಂಗ್ ಶೆಟರ್‌ನ ಬೀಗ ಒಡೆದು ಕಳವು ಮಾಡಿರುವ ಬಗ್ಗೆ ಮಾ.9ರಂದು ಬೆಳಕಿಗೆ ಬಂದಿದೆ.

ಪುತ್ತೂರಿನ ಸಾಲ್ಮರ ನಿವಾಸಿ ಜಗದೀಶ್ ಆಚಾರ್ಯರವರು ಆರ್‌ಎಕ್ಸ್ 100 ಬೈಕ್‌ನ್ನು ಗ್ಯಾರೇಜ್‌ವೊಂದರಲ್ಲಿ ದುರಸ್ಥಿಗಾಗಿ ನಿಲ್ಲಿಸಿದ್ದರು. ದುರಸ್ಥಿ ಕಾರ್ಯ ನಡೆಸಿ ಮಾ.10ರಂದು ಬೈಕ್ ತೆಗೆದುಕೊಂಡು ಹೋಗುವವರಿದ್ದರು. ಆದರೆ ಮಾ.9ರಂದು ಬೆಳಗ್ಗೆ ಗ್ಯಾರೇಜ್‌ನ ರೋಲಿಂಗ್ ಶೆಟರ್ ಬೀಗ ಒಡೆದಿರುವುದನ್ನು ಗಮನಿಸಿದ ಗ್ಯಾರೇಜ್ ಮಾಲಕರು ಒಳಗೆ ನೋಡಿದಾಗ ಯಮಹಾ ಆರ್ ಎಕ್ಸ್ 100 ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಕುರಿತು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

You may also like