Home » ಸಂಪಾಜೆ ಬಳಿ ಟೆಂಪೋ ಟ್ರಾವೆಲರ್ ಹಾಗೂ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲಿ ಮೃತ್ಯು

ಸಂಪಾಜೆ ಬಳಿ ಟೆಂಪೋ ಟ್ರಾವೆಲರ್ ಹಾಗೂ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲಿ ಮೃತ್ಯು

0 comments

ಸಂಪಾಜೆ ಬಳಿ ಟೆಂಪೋ ಟ್ರಾವೆಲರ್ ಹಾಗೂ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲಿ ಮೃತ್ಯು

ಸಂಪಾಜೆ ಬಳಿ ಟೆಂಪೋ ಟ್ರಾವೆಲರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಸಂಪಾಜೆ ಗೂನಡ್ಕ ಸಮೀಪದ ಪರ್ಲಡ್ಕ ದ ತಿರುವಿನಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.

ಅಪಘಾತದಲ್ಲಿ ಬೈಕ್ ಸವಾರ ಸುಳ್ಯ ಕಸಬಾ ದುಗ್ಗಲಡ್ಕ ಕಂದಡ್ಕ ವಿನೋದ್ ಕುಮಾರ್ (23) ಮೃತಪಟ್ಟಿದ್ದಾರೆ.

ಸವಣೂರು ನಿಂದ ವಿರಾಜಪೇಟೆ ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಗೂಡ್ಸ್ ಗಾಡಿಗೆ ಸಂಪಾಜೆಯಿಂದ ಸುಳ್ಯ ಕಡೆ ಬರುತ್ತಿದ್ದ ಬೈಕ್ ಇವುಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಪರ್ಲಡ್ಕದ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಅತಿ ವೇಗವಾದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

You may also like

Leave a Comment