Bindu Jeera: ದಕ್ಷಿಣ ಭಾರತದಲ್ಲಿ ಭಾರೀ ಹೆಸರು ಮಾಡಿರುವ ಕಾರ್ಬೋನೇಟೆಡ್ ಸೋಡಾ ಬ್ರಾಂಡ್ ಬಿಂದು ಈಗ ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಕುರಿತು ಚಿಂತನೆಯಲ್ಲಿದೆ.
ಕಂಪನಿಯು FY26ರ ಅಂತ್ಯದ ವೇಳೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಬಿಂದು ಜೀರಾ ವಿಸ್ತರಣೆ ಮಾಡುವ ಕುರಿತು ಆಲೋಚನೆಯಲ್ಲಿದೆ.
“ದಕ್ಷಿಣದಲ್ಲಿ ನಮ್ಮ ಮಾರುಕಟ್ಟೆಯನ್ನು ಕ್ರೋಢೀಕರಿಸಿದ ನಂತರ, ನಾವು ನಮ್ಮ ಆರಂಭಿಕ ವಿಸ್ತರಣಾ ಪ್ರಯತ್ನಗಳನ್ನು ಪ್ರಾರಂಭಿಸಿದ್ದೇವೆ” ಎಂದು ಬಿಂದು ಮತ್ತು ಪ್ರವೀಣ್ ಕ್ಯಾಪಿಟಲ್ ಎರಡನ್ನೂ ಹೊಂದಿರುವ ಎಸ್‌ಜಿ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್ ಹೇಳಿದರು. “ಮುಂದಿನ 2-3 ವರ್ಷಗಳಲ್ಲಿ, ನಾವು ಈ ಹೆಚ್ಚುವರಿ ರಾಜ್ಯಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದೇವೆ” ಎಂದಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಉತ್ಪನ್ನ ವಿಸ್ತರಿಸುವ ಕುರಿತು 5ರಿಂದ 6 ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ರೀತಿಯಲ್ಲಿ ಪ್ರಾರಂಭ ಮಾಡಲಾಗುತ್ತದೆ. ಮೊದಲಿಗೆ ಜೀರಾ ಪಾನೀಯಗಳ ಮೇಲೆ ಕೇಂದ್ರೀಕರಿಸುತ್ತದೆ. ನಂತರ ಶುಂಠಿ, ಕೋಕಮ್, ಮಾವು, ಲಿಚಿ, ಮತ್ತು ಪೇರಲವನ್ನು ಸೇರಿಸಲಾಗುತ್ತದೆ.
ಈಗಾಗಲೇ ಉತ್ತರ ಮತ್ತು ಪಶ್ಚಿಮದಾದ್ಯಂತ ಪೂರೈಕೆ ಮತ್ತು ವಿತರಣೆ ಹೆಚ್ಚಿಸಲು ಈಗಾಗಲೇ ಸೇಲ್ಸ್ ಟೀಮ್‌ಗಳನ್ನು ಕೂಡಾ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: Belagavi: ಆಟೋದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
