Home » ತನ್ನ ಸಂಗಾತಿ ಇಹಲೋಕ ತ್ಯಜಿಸಿದ್ದಕ್ಕೆ ಕಣ್ಣೀರಿನ ಮೂಲಕ ವಿದಾಯ ಹೇಳುವ ಹಕ್ಕಿಯ ಮನಕಲುಕುವ ವೀಡಿಯೋ ವೈರಲ್ !!

ತನ್ನ ಸಂಗಾತಿ ಇಹಲೋಕ ತ್ಯಜಿಸಿದ್ದಕ್ಕೆ ಕಣ್ಣೀರಿನ ಮೂಲಕ ವಿದಾಯ ಹೇಳುವ ಹಕ್ಕಿಯ ಮನಕಲುಕುವ ವೀಡಿಯೋ ವೈರಲ್ !!

0 comments

ನಮ್ಮ ಪ್ರೀತಿ ಪಾತ್ರರು ಇಹಲೋಕ ತ್ಯಜಿಸಿದರೆ ನಮಗೆ ಈ ಜಗತ್ತೇ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಇದು ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳಿಗೂ ಅನ್ವಯಿಸುತ್ತದೆ. ಹೌದು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಗ್ಯಾರಂಟಿ. ಈ ವೀಡಿಯೋದಲ್ಲಿ ಹಕ್ಕಿಯೊಂದು ಸಾವನ್ನಪ್ಪಿದ್ದು, ಅದರ ಸಂಗಾತಿ ಅದಕ್ಕೆ ಕೊನೆ ವಿದಾಯ ಹೇಳುವ ದೃಶ್ಯ ಮನಕಲಕುವಂತಿದೆ.  

ಪ್ರಾಣಿಗಳು ಮತ್ತು ಪಕ್ಷಿಗಳ ತಮಾಷೆಯ ಮತ್ತು ಮುದ್ದಾದ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ. ಕೆಲವೊಮ್ಮೆ ಕೆಲವು ವೀಡಿಯೋ ನಮ್ಮ ಹೃದಯವನ್ನು ಗೆಲ್ಲುತ್ತವೆ. ಆದರೆ ಈ ವೀಡಿಯೋ ನೋಡಿದರೆ ಅಳು ಬರುತ್ತದೆ. ಪ್ರಾಣಿ-ಪಕ್ಷಗಳಲ್ಲಿಯೂ ಎಷ್ಟೊಂದು ಪ್ರೀತಿ ಇರುತ್ತದೆ, ಮನುಷ್ಯನಂತೆಯೇ ಅವುಗಳಿಗೂ ಭಾವನೆಗಳಿರುತ್ತವೆ ಎನ್ನುವುದಕ್ಕೆ ಈ ವೀಡಿಯೋ ನಿದರ್ಶನವಾಗಿದೆ. 

ಈ ವೀಡಿಯೋದಲ್ಲಿ ಯಾವುದೋ ವಾಹನ ಬಡಿದು ಪಕ್ಷಿಯೊಂದು ಸಾವನ್ನಪ್ಪಿ ರಸ್ತೆಯ ಮಧ್ಯೆ ಬಿದ್ದಿದೆ. ತನ್ನ ಪ್ರೀತಿಯ ಸಂಗಾತಿ ಕಳೆದುಕೊಂಡು ಇನ್ನೊಂದು ಪಕ್ಷಿಯು ದುಃಖಿಸುತ್ತಾ, ಮೃತಪಟ್ಟ ಪಕ್ಷಿಯ ಬಳಿ ಬರುವ ಸಂಗಾತಿ ಪಕ್ಷಿ ಮೊದಲು ಅದನ್ನು ಎಬ್ಬಿಸಲು ಪ್ರಯತ್ನಿಸುತ್ತದೆ. ಅದು ವ್ಯರ್ಥ ಎಂದು ಅರಿತ ನಂತರ ಅದಕ್ಕೆ ಚುಂಬಿಸುವ ಮೂಲಕ ನೋವಿನ ವಿದಾಯ ಹೇಳುತ್ತದೆ.

ಈ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರೊಂದಿಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಂದು ನಿಮಿಷವಿರುವ ಈ ವುಡಿಯೋ ಇದೀಗ ಪ್ರತಿಯೊಬ್ಬರ ಗಮನ ಸೆಳೆಯುತ್ತಿದೆ. ಪಕ್ಷಿಯ ಸಾವಿಗೆ ನೆಟಿಜನ್‍ಗಳು ದುಃಖ ವ್ಯಕ್ತಪಡಿಸಿದ್ದಾರೆ. ಅನೇಕರು ಮನಷ್ಯರ ಸ್ವಾರ್ಥಕ್ಕೆ ಪ್ರಾಣಿ-ಪಕ್ಷಿಗಳು ಹೇಗೆ ಅನಾಥವಾಗಿ ಸಾವನ್ನಪ್ಪುತ್ತಿವೆ ನೋಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

You may also like

Leave a Comment