Home » ಬಿರಿಯಾನಿ ತಿಂದರೆ ಲೈಂಗಿಕ ಶಕ್ತಿ ಕಡಿಮೆ | ಬಿರಿಯಾನಿ ಅಂಗಡಿಗಳಿಗೆ ಬೀಗ

ಬಿರಿಯಾನಿ ತಿಂದರೆ ಲೈಂಗಿಕ ಶಕ್ತಿ ಕಡಿಮೆ | ಬಿರಿಯಾನಿ ಅಂಗಡಿಗಳಿಗೆ ಬೀಗ

by Praveen Chennavara
0 comments

ಈ ಬಿರಿಯಾನಿಗಳಲ್ಲಿ ಬಳಸುವ ಮಸಾಲೆ ಪದಾರ್ಥಗಳಿಂದ ಪುರುಷತ್ವವೇ ಕುಗ್ಗುತ್ತಿದೆ, ಹಾಗಾಗಿ ಕೆಲ ಗಂಡಸರಲ್ಲಿ ಲೈಂಗಿಕ ಶಕ್ತಿ ಕಡಿಮೆಯಾಗಿದೆ.

ಹೀಗೆಂದು ಆರೋಪಿಸಿದ್ದು ಪಶ್ಚಿಮ ಬಂಗಾಳದ ಟಿಎಂಸಿ ಮಾಜಿ ಸಚಿವ ರಬೀಂದ್ರನಾಥ ಘೋಷ್‌. ಬರೀ ಆರೋಪಿಸಿದ್ದು ಮಾತ್ರವಲ್ಲ ಕೂಚ್‌ ಬೆಹಾರ್‌ನಲ್ಲಿದ್ದ ಎರಡು ಅಂಗಡಿಗಳಿಗೆ ಅವರು ಬಾಗಿಲು ಹಾಕಿಸಿದ್ದಾರೆ.

ಸದ್ಯ ಕೂಚ್‌ ಬೆಹಾರ್‌ ನಗರಪಾಲಿಕೆ ಅಧ್ಯಕ್ಷರಾಗಿರುವ ಅವರು ಬಲವಂತ ಮಾಡಿ 2 ಬಿರಿಯಾನಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಬಿಹಾರ, ಉತ್ತರಪ್ರದೇಶದಿಂದ ಬಂದ ಕೆಲವರು ಪರವಾನಗಿಯಿಲ್ಲದೇ ಬಿರಿಯಾನಿ ಅಂಗಡಿಗಳನ್ನು ಹಾಕಿದ್ದಾರೆ. ಅಲ್ಲಿ ಯಾವ ಮಸಾಲೆ ಬಳಸುತ್ತಾರೋ ಗೊತ್ತಿಲ್ಲ, ಲೈಂಗಿಕಶಕ್ತಿ ಕುಗ್ಗಿದೆ ಎಂದು ಹಲವರು ಆರೋಪಿಸಿದ್ದಾರೆ.

ಹೀಗಾಗಿ ಅಂತಹ ಅಂಗಡಿಗಳನ್ನು ಪರಿಶೀಲಿಸಿದಾಗ ಪರವಾನಗಿ ಇಲ್ಲದ ಅಂಗಡಿಗಳೇ ಕಂಡುಬಂದಿವೆ. ಅದಕ್ಕೆ ಬಾಗಿಲು ಹಾಕಿಸಲಾಗಿದೆ ಎಂದಿದ್ದಾರೆ.

You may also like

Leave a Comment