Home » Operation Kamala: ಬಿಜೆಪಿ ಬ್ರೋಕರ್‌ಗಳು ಬಿಡ್ತಿಲ್ಲ: ಬನ್ನಿ ಬನ್ನಿ ಅಂತ ಬೆನ್ನು ಬಿದ್ದಿದ್ದಾರೆ – ರವಿ ಗಣಿಗ ಮತ್ತೇ ಆರೋಪ

Operation Kamala: ಬಿಜೆಪಿ ಬ್ರೋಕರ್‌ಗಳು ಬಿಡ್ತಿಲ್ಲ: ಬನ್ನಿ ಬನ್ನಿ ಅಂತ ಬೆನ್ನು ಬಿದ್ದಿದ್ದಾರೆ – ರವಿ ಗಣಿಗ ಮತ್ತೇ ಆರೋಪ

2 comments
Operation Kamala

Operation Kamala: ಆಪರೇಷನ್ ಕಮಲ ಆದಾಗ ಆವಾಗಲೇ 60 ಕೋಟಿ ಖರ್ಚು ಮಾಡಿದ್ರು. ಬಾಳ ಸತ್ಯವಂತರ ತರಹ ಮಾತಾಡ್ತಾರೆ ಬಿಜೆಪಿಯವರು(BJP). 30 ಕೋಟಿ ಕೈಗೆ ಕೊಟ್ಟು 30 ಕೋಟಿ ಚುನಾವಣೆಗೆ ಖರ್ಚು(Election) ಮಾಡಿದ್ರು ಅಂತ ಅವರ ನಾಯಕರೇ ಹೇಳಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಡಿಟೇಲ್ಸ್ ಕೊಡ್ತೀವಿ ನೋಡ್ತಾ ಇರಿ ಎಂದು ಕಾಂಗ್ರೆಸ್ ಶಾಸಕ(Congress MLA) ರವಿ ಗಣಿಗ(Ravi Ganiga) ಮತ್ತೆ ಆರೋಪಿಸಿದ್ದಾರೆ.

ಬಿಜೆಪಿ ಬ್ರೋಕರ್‌ಗಳು ದಿನವೂ ಬಿಡ್ತಿಲ್ಲ, ಬನ್ನಿ ಬನ್ನಿ ಅಂತ ಬೆನ್ನು ಬಿದ್ದಿದ್ದಾರೆ. ಇದರ ಬಗ್ಗೆ ಸಿಎಂ, ಡಿಸಿಎಂಗೆ(CM , DCM) ಸೂಕ್ತ ದಾಖಲೆಗಳೊಂದಿಗೆ(Records) ಮಾಹಿತಿ ನೀಡ್ತೇವೆ. ಬಿಜೆಪಿಯವರು ತೆಪ್ಪಗಿರಬೇಕು, ನಮ್ಮತ್ರ ಸಾಕ್ಷಿ ಇದೆ. ಬಿಜೆಪಿಯಲ್ಲಿ ಸ್ವಲ್ಪ ಬ್ರೋಕರ್ ಗಳಿದ್ದಾರೆ. ಅವರೇ ಸರ್ಕಾರ ಬೀಳಿಸುವುದಕ್ಕೆ ಟ್ರೈ ಮಾಡ್ತಿದ್ದಾರೆ. ದರ್ಶನ್ ಟೀ ಕುಡಿಯೋದೇ ಹೊರಗೆ ಬಂತು. ಊರಿಗೆ ಬಂದವರು ನೀರಿಗೆ ಬರಲ್ವಾ? ಇವ್ರ ದಾಖಲೆ ಕೂಡ ಹೊರಗೆ ಬಂದೇ ಬರುತ್ತದೆ ಎಂದು ಕಿಡಿ ಕಾರಿದರು.

ಆಪರೇಷನ್ ಕಮಲ ಹೇಳಿಕೆ ರವಿ ಗಣಿಗ ವಿರುದ್ದ 100 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂಬ ಜೋಷಿ ಹೇಳಿಕೆ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಶಾಸಕ ರವಿ ಗಣಿಗ ಮಾತನಾಡಿ ನಾವು ಕಾನೂನು ಹೋರಾಟ ಮಾಡಲು ಸಿದ್ದರಿದ್ದೇವೆ. ಅವರು ಕೇಸ್ ಹಾಕಲಿ, ನಮ್ಮ ಬಳಿಯೂ ದಾಖಲಾತಿ ಇವೆ. ಸಮಯ, ಕಾಲ ಬಂದಾಗ ನಾವು ದಾಖಲಾತಿ ಬಿಡುಗಡೆ ಮಾಡಬೇಕು. 100 ಕೋಟಿ ವಿಷಯ ಬಿಜೆಪಿ ಅವರಿಗೆ ಗೊತ್ತಿಲ್ಲವಾ…? 17 ಜನ ಶಾಸಕರನ್ನ ಇವರು ಕರೆದುಕೊಂಡು ಹೋಗಿರಲಿಲ್ಲವಾ? ಎಂದು ಪ್ರಶ್ನಿಸಿದರು.

You may also like

Leave a Comment