Home » ಬಿಜೆಪಿ ಮುಖಂಡನ ಮೇಲೆ ಮನಬಂದಂತೆ ಗುಂಡಿಕ್ಕಿ ಬರ್ಬರ ಹತ್ಯೆ!!

ಬಿಜೆಪಿ ಮುಖಂಡನ ಮೇಲೆ ಮನಬಂದಂತೆ ಗುಂಡಿಕ್ಕಿ ಬರ್ಬರ ಹತ್ಯೆ!!

0 comments

ಬಿಜೆಪಿ ಮುಖಂಡರ ಕೊಲೆ ಸಾಲು-ಸಾಲಾಗಿ ನಡೆಯುತ್ತಲೇ ಇದ್ದು, ಕೋಮುಗಲಭೆ, ದ್ವೇಷ ಹೆಚ್ಚುತ್ತಲೇ ಇದೆ. ಕ್ಷುಲ್ಲಕ ಕಾರಣಕ್ಕೆ ಕೊಲೆ, ಗಲಾಟೆ ಸಂಭವಿಸುತ್ತಲೇ ಇದೆ. ಅದೇ ಸಾಲಿಗೆ ಇನ್ನೊಂದು ಪ್ರಕರಣ ಸೇರಿಕೊಂಡಿದ್ದು, ಬಟ್ಟೆ ಶೋರೂಮ್‌ನಲ್ಲಿ ಸ್ಥಳೀಯ ಬಿಜೆಪಿ ಮುಖಂಡನನ್ನು ಐವರು ದುಷ್ಕರ್ಮಿಗಳು ಮನಬಂದಂತೆ ಗುಂಡಿಕ್ಕಿ ಕೊಂದಿರುವ ಘಟನೆ ವರದಿಯಾಗಿದೆ.

ಬಿಜೆಪಿ ನಾಯಕ ಸುಖ್ಬೀರ್ ಖತಾನಾ ಅಲಿಯಾಸ್ ಸುಖಿ ತನ್ನ ಸ್ನೇಹಿತನೊಂದಿಗೆ ಬಟ್ಟೆ ಬಳಿಗೆ ಪ್ರವೇಶಿಸುತ್ತಿದ್ದಂತೆ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಇತರ ವ್ಯಾಪಾರಿಗಳೂ ಸ್ಥಳದಿಂದ ಹೆದರಿ ಓಡಿ ಹೋಗಿದ್ದಾರೆ.

ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ರಿಥೋಜ್ ಗ್ರಾಮದ ನಿವಾಸಿಯಾದ ಸುಖ್ಬೀರ್ ಖತಾನಾ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು, ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಸಹರಾನ್ ತಿಳಿಸಿದ್ದಾರೆ.

ಇಂತಹ ಒಂದು ಅಮಾನವೀಯ ಘಟನೆ ಹರಿಯಾಣದ ಗುರುಗ್ರಾಮದ ಸದರ್ ಬಜಾರ್ ಪ್ರದೇಶದಲ್ಲಿ ನಡೆದಿದೆ. ಶೂಟ್ ಮಾಡಿ ಕೊಂದ ಬಂದೂಕು ಹಿಡಿದಿದ್ದ ದಾಳಿಕೋರರ ದೃಶ್ಯ, ಬಟ್ಟೆ ಶೋರೂಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

You may also like

Leave a Comment