Home » DK Shivkumar : ಬಿಜೆಪಿಯಿಂದ ಡಿಕೆ ಶಿವಕುಮಾರ್ ಊಹಿಸಲಾಗದಂತ ಆಫರ್ !! ಮನಸ್ಸು ಮಾಡಿದ್ರೆ ಒಲಿಯುತ್ತಿತ್ತು ಆ ಪಟ್ಟ

DK Shivkumar : ಬಿಜೆಪಿಯಿಂದ ಡಿಕೆ ಶಿವಕುಮಾರ್ ಊಹಿಸಲಾಗದಂತ ಆಫರ್ !! ಮನಸ್ಸು ಮಾಡಿದ್ರೆ ಒಲಿಯುತ್ತಿತ್ತು ಆ ಪಟ್ಟ

0 comments

 

DK Shivkumar : ಕರ್ನಾಟಕ ರಾಜಕೀಯದಲ್ಲಿ ಸದ್ಯ ಸಿಎಂ ಬದಲಾವಣೆ ವಿಚಾರ ಟ್ರೆಂಡಿಂಗ್ ನಲ್ಲಿದೆ. ಈ ನಡುವೆ ಡಿಕೆ ಶಿವಕುಮಾರ್ ಅವರು ಬಿಜೆಪಿ ನೀಡಿದ್ದ ಆಫರ್ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದು ಇದೀಗ ರಾಜ್ಯ ರಾಜಕೀಯದಲ್ಲಿ ಈ ವಿಚಾರ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.

 

ಹೌದು, ಎ ಸಿಂಬಲ್ ಆಫ್ ಲಾಯಲ್ಟಿ ಡಿಕೆಶಿ ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತಾಡಬೇಕಾದ್ರೆ, ಈ ಹಿಂದೆ ಇದ್ದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನಗೆ ಬಿಜೆಪಿಯಿಂದ ಬಿಗ್ ಆಫರ್ ಬಂದಿತ್ತು. ಉಪಮುಖ್ಯಮಂತ್ರಿಯಾಗುತ್ತಿರೋ? ಅಥವಾ ಜೈಲಿಗೆ ಹೋಗುತ್ತೀರೋ ಎಂದು ಹೇಳಲಾಗಿತ್ತು ಈ ಸಂದರ್ಭದಲ್ಲಿ ನಾನು ಜೈಲನ್ನೇ ಆರಿಸಿಕೊಂಡ ಎಂದು ಹೇಳಿದ್ದಾರೆ.

 

 ಈ ಕುರಿತಾಗಿ ಮಾಹಿತಿ ನೀಡಿದ ಅವರು ಸಮ್ಮಿಶ್ರ ಸರ್ಕಾರದಲ್ಲಿ ಹತ್ತು ಜನ‌ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್ ಗೆ ಕರೆದುಕೊಂಡು ಬಂದೆ.‌ ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್ ಫೋನ್ ನಿಂದ ಕರೆ ಬಂದಿತ್ತು. ನನ್ನ ಜೊತೆ ಡಿಜಿಯೂ ಇದ್ದ‌ರು. ಅವರು ದೂರವಾಣಿ ಕರೆಯಲ್ಲಿ ಮಾತನಾಡಿದರು. ನನ್ನ ಜೊತೆ ಡಿ.ಕೆ. ಸುರೇಶ್ ಅವರೂ ಇದ್ದರು. ಕರೆ ಮಾಡಿದವರು ನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ ಎಂದು ಕೇಳಿದರು. ಎಲ್ಲಾ ಶಾಸಕರನ್ನು ವಾಪಸ್ಸು ಕರೆದುಕೊಂಡು ಬನ್ನಿ ಎಂದು ಆಯ್ಕೆ ‌ನೀಡಿದರು ಎಂದು ತಿಳಿಸಿದರು.

 

ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನ ಬಿಡುವುದಿಲ್ಲ. ಪಕ್ಷನಿಷ್ಠೆಗಾಗಿ ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ಅವರು ನನಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದರು. ಬಂಗಾರಪ್ಪ ಅವರು ನನಗೆ ಸಹಕಾರ ನೀಡಿದ್ದರು. ಈ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ ಎಂದರು.

You may also like