Home » Muniratna:ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ! ಜೈಲಿಂದ ಬಿಡುಗಡೆಯಾದ ಶಾಸಕ ಹೋಗಿದ್ದೆಲ್ಲಿ?!

Muniratna:ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ! ಜೈಲಿಂದ ಬಿಡುಗಡೆಯಾದ ಶಾಸಕ ಹೋಗಿದ್ದೆಲ್ಲಿ?!

0 comments
Muniratna

MLA Muniratna: ಜಾತಿನಿಂದನೆ ಪ್ರಕರಣದ ಹಿನ್ನಲೆ ಅರೆಸ್ಟ್ ಆಗಿದ್ದ ಶಾಸಕ ಮುನಿರತ್ನ ( MLA Muniratna) ಜಾಮೀನು ಪಡೆದುಕೊಂಡು ಜೈಲಿನಿಂದ ಬಿಡುಗಡೆ ಆಗಿದ್ದ ಬೆನ್ನಲ್ಲೇ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದರು. ಇದೀಗ ಮುನಿರತ್ನ ಅವರಿಗೆ ಜೈಲಿನಿಂದ ಬಿಡುಗಡೆ ದೊರಕಿದೆ. ಇದರಿಂದ ಮುನಿರತ್ನ ಬೆಂಬಲಿಗರು ಸಂತೋಷ ಪಟ್ಟಿದ್ದಾರೆ.

ಹೌದು, ಅತ್ಯಾಚಾರ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ 20 ಕ್ಕೂ ಹೆಚ್ಚು ದಿನಗಳಿಂದ ಇದ್ದ ಬಿಜೆಪಿ ಶಾಸಕ ಮುನಿರತ್ನ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬಿಡುಗಡೆಯಾದರು. ಸದ್ಯ ಜೈಲಿನಲ್ಲಿದ್ದ ಶಾಸಕರು ಬುಧವಾರ ಬಿಡುಗಡೆಯಾಗಿ, ಜೈಲಿನಿಂದ ನೇರವಾಗಿ ತಮ್ಮ ನಿವಾಸದ ಕಡೆ ತೆರಳಿರುವುದಾಗಿ ಮಾಹಿತಿ ತಿಳಿದು ಬಂದಿದೆ.

You may also like

Leave a Comment