Home » BJP MP Kissing: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಕ್ಕಿದ ಬಿಜೆಪಿ ಸಂಸದ

BJP MP Kissing: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಮುತ್ತಿಕ್ಕಿದ ಬಿಜೆಪಿ ಸಂಸದ

by Mallika
1 comment
BJP MP Kissing

BJP MP Kissing: ಬಿಜೆಪಿ ಸಂಸದ ಖಗೇನ್‌ ಮುರ್ಮು ಅವರು ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮಹಿಳೆಗೆ ಮುತ್ತಿಕ್ಕಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಾಗೂ ವಿವಾದಕ್ಕೆ ಕೂಡಾ ಕಾರಣವಾಗಿದೆ.

ಬಿಜೆಪಿ ಸಂಸದ ಮಹಿಳೆಗೆ ಮುತ್ತಿಕ್ಕಿರುವ ವೀಡಿಯೋದ ಫೋಟೋಗಳನ್ನು ತೃಣಮೂಲ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಹಾಗೂ ಮಹಿಳಾ ವಿರೋಧಿಗಳು ಬಿಜೆಪಿ ನಾಯಕರು ಎಂದು ಬರೆದಿದ್ದಾರೆ.

ಚುನಾವಣಾ ಪ್ರಚಾರದ ಸಮಯದಲ್ಲಿ ಮಹಿಳೆಗೆ ಚುಂಬಿಸಿದ ಬಿಜೆಪಿ ಸಂಸದನ ವೀಡಯೋ ಸ್ಕ್ರೀನ್‌ ಶಾಟ್‌ ಹಾಕಿದ್ದು, ಇದು ಬಿಜೆಪಿ ಸಂಸದ ಮತ್ತು ಮಲ್ದಹಾ ಉತ್ತರ ಕ್ಷೇತ್ರದ ಅಭ್ಯರ್ಥಿಯಾದ ಖಗೆನ್‌ ಮುರ್ಮು ಅವರ ಚುನಾವಣಾ ಪ್ರಚಾರ, ಬಿಜೆಪಿ ನಡೆಸುವ ಚುನಾವಣಾ ಪ್ರಚಾರದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಈ ಸಂದರ್ಭದಲ್ಲಿ ಮಹಿಳೆ ಪ್ರತಿಕ್ರಿಯೆ ನೀಡಿದ್ದು, ನನ್ನ ತಂದೆಗೆ ಸಮಾನರಾದ ವ್ಯಕ್ತಿ ನನ್ನ ಮೇಲೆ ಪ್ರೀತಿಯನ್ನು ತೋರಿಸಿ ನನ್ನ ಕೆನ್ನೆಗೆ ಮುತ್ತು ಕೊಟ್ಟರೆ ಸಮಸ್ಯೆ ಎಲ್ಲಿದೆ? ಕೊಳಕು ಮನಸ್ಥಿತಿಯನ್ನು ಜನ ಏಕೆ ಹೊಂದಿದ್ದಾರೆ? ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯುಗಾದಿ ಸಂಭ್ರಮದಲ್ಲಿ ರಥೋತ್ಸವದ ವೇಳೆ ಭೀಕರ ಅವಘಡ; ವಿದ್ಯುತ್‌ ತಂತಿ ಸ್ಪರ್ಶಿಸಿ 13 ಮಕ್ಕಳಿಗೆ ಗಾಯ

 

You may also like

Leave a Comment