Home » BJP Mysore Chalo: 5ನೇ ದಿನಕ್ಕೆ ಕಾಲಿಟ್ಟ ಮೈಸೂರು ಚಲೋ: ಯಾತ್ರೆಯಲ್ಲಿ ಹೆಜ್ಜೆ ಹಾಕಲು ಹೊರಟ ದಕ್ಷಿಣಕನ್ನಡ, ಉಡುಪಿ ಬಿಜೆಪಿ ಕಾರ್ಯಕರ್ತರು

BJP Mysore Chalo: 5ನೇ ದಿನಕ್ಕೆ ಕಾಲಿಟ್ಟ ಮೈಸೂರು ಚಲೋ: ಯಾತ್ರೆಯಲ್ಲಿ ಹೆಜ್ಜೆ ಹಾಕಲು ಹೊರಟ ದಕ್ಷಿಣಕನ್ನಡ, ಉಡುಪಿ ಬಿಜೆಪಿ ಕಾರ್ಯಕರ್ತರು

1 comment
BJP Mysore Chalo

BJP Mysore Chalo: ಕಳೆದ ಐದು ದಿನಗಳ ಹಿಂದೆ ಬಿಜೆಪಿ-ಜೆಡಿಎಸ್‌ ಸೇರಿ ರಾಜ್ಯ ಸರ್ಕಾರ ಭ್ರಷ್ಟಾಚಾರ ವಿರೋಧಿಸಿ ಹೊರಟ ಮೈಸೂರು ಚಲೋ ಪಾದಯಾತ್ರೆ ನಿನ್ನೆ ಮಂಡ್ಯ ತಲುಪಿದೆ. ಇಂದು ಮತ್ತೆ ಮಂಡ್ಯದಿಂದ ಪ್ರಾರಂಭಗೊಂಡಿದೆ. ಇಂದಿನ ಪಾದಯಾತ್ರೆಯಲ್ಲಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಭಾಗಿಯಾಗಲು ಮಂಡ್ಯಡ್ಯ ತಲುಪಿದ್ದಾರೆ. ಹಾಗೂ ಪಾದೆಯಾತ್ರೆಯಲ್ಲಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.

ಪಾದಯಾತ್ರೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೆ ಅವರೊಂದಿಗೆ ಕರಾವಳಿಯ ಹುಲಿ ಕುಣಿತ ತಂಡವೂ ಪಾಲ್ಗೊಂಡಿದೆ. ಪಾದಯಾತ್ರೆಯ ಉದ್ದಕ್ಕೂ ಹುಲಿಕುಣಿತ ಯಾತ್ರೆಗೆ ವಿಶೇಷ ಮೆರುಗು ತಂದಿದೆ.

ಉಡುಪಿ ಜಿಲ್ಲಾ ಬಿಜೆಪಿ ತಂಡ ವಿಶೇಷವಾದ ಹಾಡಿನ ಮೂಲಕ ಪಾದಯಾತ್ರೆಯಲ್ಲಿ ಪಾಲ್ಗೊಂಡಿದೆ. ಸ್ವತಃ ತಾವೇ ರಚನೆ ಮಾಡಿರುವ ಕಾಂಗ್ರೆಸ್ ವಿರೋಧಿ ಹಾಡಿಗೆ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿ ಕುಣಿದರು. ಹಾಡಿಗೆ ಶಾಸಕರಾದ ಪ್ರಭು ಚೌಹಾಣ್ ಮತ್ತು ಶರಣು ಸಲಗರ ಡೋಲು ಬಾರಿಸಿದ್ದು ವಿಶೇಷವಾಗಿತ್ತು. ಇದರೊಂದಿಗೆ ಶಾಸಕರ ಡೋಲು ಬಡಿತಕ್ಕೆ ಹುಲಿವೇಷ ತಂಡ ಕೂಡ ಕುಣಿದು ಕುಪ್ಪಳಿಸಿದೆ. ಹುಲಿವೇಷ ತಂಡಕ್ಕೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷ ಹುರುಪು ನೀಡಿದೆ.

You may also like

Leave a Comment