Home » BJP National President: ಯಾರಾಗ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು?! ಈ ಸಲ ಮಹಿಳೆಯ ಮುಡಿಗೇರುತ್ತಾ ‘ಕಮಲ’?!

BJP National President: ಯಾರಾಗ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು?! ಈ ಸಲ ಮಹಿಳೆಯ ಮುಡಿಗೇರುತ್ತಾ ‘ಕಮಲ’?!

4 comments
BJP National President

BJP National President: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಮೋದಿಯವರ(PM Modi) ಸಚಿವ ಸಂಪುಟ ಸೇರುವ ಮೂಲಕ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಪ್ರಪಂಚದ ಅತೀ ದೊಡ್ಡ ಪಕ್ಷಗಳಲ್ಲಿ ಒಂದಾದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಖಾಲಿ ಇದೆ. ಹೀಗಾಗಿ ಬಿಜೆಪಿಯ ಮುಂದಿನ ರಾಷ್ಟ್ರೀಯ ಅಧ್ಯಕ್ಷ ಸ್ಥಾನ(BJP National President) ಯಾರ ಪಾಲಿಗೆ ಒಲಿಯಬಹುದು ಎಂಬುದು ಭಾರೀ ಕುತೂಹಲ. ಹಾಗಿದ್ರೆ ಈ ಅಧ್ಯಕ್ಷರ ರೇಸ್ ನಲ್ಲಿ ಯಾರಿದ್ದಾರೆ? ಈ ಸಲ ಕಮಲ ಪುರುಷರ ಕೈ ಹಿಡಿಯುತ್ತೋ ಇಲ್ಲ, ಮಹಿಳೆಯ ಮುಡಿಗೇರುತ್ತೋ? ಈ ಬಗ್ಗೆ ಒಂದು ಒಳ ನೋಟ ಇಲ್ಲಿದೆ.

Government Employee: ಹಳೆಯ ಪಿಂಚಣಿ ಯೋಜನೆ ಮರು ಜಾರಿ: ಬದಲಾವಣೆಗೆ ಒಮ್ಮೆ ಮಾತ್ರ ಅವಕಾಶ, ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿ!

ಸದ್ಯ ಜೆಪಿ ನಡ್ಡಾ(J P Nadda) ಅವರಿಂದ ತೆರವಾಗಿರುವ ಬಿಜೆಪಿ(BJp) ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸಂಘಟನ ಚತುರರೆಂದು ಪರಿಗಣಿ ಸಲಾಗಿರುವ ನಾಲ್ವರು ಪ್ರಭಾವಿ ಹಾಗೂ ಘಟಾನುಘಟಿ ನಾಯಕರ ಹೆಸರು ಕೇಳಿಬಂದಿದೆ. ಯಾರು ಅವರು? ಪ್ರಸ್ತುತ ಅವರು ಮಾಡುತ್ತಿರುವ, ನಿಭಾಯಿಸುತ್ತಿರುವ ಹುದ್ದೆ ಯಾವುದು ? ತಿಳಿಯೋಣ.

ಸ್ಪರ್ಧೆಯಲ್ಲಿ ಯಾರಿದ್ದಾರೆ?
* ವಿನೋದ್‌ ತಾಬ್ಡೆ(Vinod Tambde)- ಪ್ರಸ್ತುತ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆಗಿರುವ ಅವರು ಮಹಾರಾಷ್ಟ್ರದ ಮಾಜಿ ಸಚಿವರು.
* ಕೆ ಲಕ್ಷ್ಮಣ್‌(K Lakshman)- ಬಿಜೆಪಿ ಒಬಿಸಿ ಮೋರ್ಚಾದ ಮುಖ್ಯಸ್ಥರಾದ ಅವರು ತೆಲಂಗಾಣದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದರು.
* ಸುನಿಲ್‌ ಬನ್ಸಾಲ್‌(Sunil Bansal)- ಪ್ರಸಕ್ತ ಪಶ್ಚಿಮ ಬಂಗಾಲ, ತೆಲಂಗಾಣ, ಒಡಿಶಾ ರಾಜ್ಯಗಳ ಬಿಜೆಪಿ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿರುವ ಸುನಿಲ್‌ ಬನ್ಸಾಲ್‌ ಹೆಸರೂ ಕೇಳಿಬರುತ್ತಿದೆ.
* ಓಂ ಮಾಥುರ್‌(Om Mathur) – ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿರುವ ಓಂ ಮಾಥುರ್‌ ಹೆಸರೂ ಕೂಡ ಕೇಳಿಬರುತ್ತಿದೆ.

ಇಷ್ಟೇ ಅಲ್ಲದೆ ಬಿಜೆಪಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಮೊದಲ ಬಾರಿಗೆ ಮಹಿಳೆಯನ್ನು ಆಯ್ಕೆ ಮಾಡುವ ಚಿಂತನೆಯನ್ನೂ ಬಿಜೆಪಿ ವರಿಷ್ಠರು ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಿಜೆಪಿ ಏನಾದರೂ ಮಹಿಳೆಗೆ ಅಧ್ಯಕ್ಷ ಪಟ್ಟ ಕಟ್ಟಿದರೆ ಪಕ್ಷವು ಮಹಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ ಎಂದು ಬಿಂಬಿತವಾಗುತ್ತದೆ. ಇಷ್ಟೇ ಅಲ್ಲದೆ ಈ ಸಲ ಲೋಕಸಭಾ ಸ್ಪೀಕರ್ ಆಗಿ ಆಂಧ್ರದ ಪುರಂದೇಶ್ವರಿ ಅವರ ಹೆಸರೂ ಮುಂಚೂಣಿಯಲ್ಲಿದೆ. ಹೀಗಾಗಿ ಎರಡು ಪ್ರಮುಖ ಹುದ್ದೆಗಳನ್ನೇ ಬಿಜೆಪಿ ಮಹಿಳೆಗೆ ನೀಡಲು ಚಿಂತಿಸಿದೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಸಂಭಾವನಿಯ ಮಹಿಳೆಯರ ಹೆಸರು ಯಾರದ್ದೂ ಕೇಳಿಬಂದಿಲ್ಲ.

Bengaluru Police Commissioner B.Dayananda: ಬೆಂಗಳೂರು ಪೊಲೀಸ್‌ ಕಮಿಷನರ್‌ ಬಿ ದಯಾನಂದ್‌ ದರ್ಶನ್‌ ಅರೆಸ್ಟ್‌ ಬಗ್ಗೆ ಹೇಳಿದ್ದೇನು?

You may also like

Leave a Comment