1
Bengaluru: ಬಿಜೆಪಿ, ಆರೆಸ್ಸೆಸ್ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಕೋಮುದ್ವೇಷಗಳನ್ನು ಹರಡಿಸುತ್ತಿದ್ದು, ಇವುಗಳು ಧರ್ಮ ಧರ್ಮಗಳ ನಡುವೆ ವೈಮನಸ್ಸು ಉಂಟು ಮಾಡುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕೇವಲ ಕರಾವಳಿ ಅಷ್ಟೇ ಅಲ್ಲದೆ, ಹುಬ್ಬಳ್ಳಿ ಧಾರವಾಡ ಮಲೆನಾಡು ಭಾಗಗಳಲ್ಲೂ ಈ ಸಂಘಟನೆಗಳು ಪ್ರಚೋದನ ಭಾಷಣಗಳನ್ನು ಮಾಡುವ ಮೂಲಕ ಕೋಮುದ್ವೇಷ ಹೆಚ್ಚಿಸುತ್ತಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿವೆ ಎಂದಿದ್ದಾರೆ.
ಈ ದ್ವೇಷಯುಕ್ತ ಭಾಷಣಗಳನ್ನು ತಡೆಯಲು ರಾಜ್ಯ ಸರ್ಕಾರ ಸದ್ಯದಲ್ಲೇ ಹೊಸ ಕಾಯ್ದೆ ಜಾರಿಗೆ ತರಲಿದೆ ಎಂದು ಕೂಡ ಖರ್ಗೆ ತಿಳಿಸಿದ್ದಾರೆ.
