Dharmasthala Case: ಧರ್ಮಸ್ಥಳ ವಿರುದ್ಧ ಷಢ್ಯಂತ್ರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿ, ನಮಸ್ಕಾರ ಹಾಕಿ ಬರ್ತೇವೆ ಅಷ್ಟೇ. ನಮ್ಮ ನಂಬಿಕೆ ಅದು, ನಮ್ಮ ಭಕ್ತಿ ಅದು. ಇನ್ಯಾವುದೇ ಉದ್ದೇಶ ಈ ಭೇಟಿ ಹಿಂದೆ ಇಲ್ಲ. ನಾವು ಪ್ರಕರಣದ ತನಿಖೆಯಲ್ಲಿ ಮಧ್ಯಪ್ರವೇಶ ಮಾಡ್ತಿಲ್ಲ. ತನಿಖೆ ಬೇಗ ಮುಗಿಯೋದು ಬೇಕಷ್ಟೇ ಅನ್ನೋದು ಮಾತ್ರ ನಮ್ಮ ಬೇಡಿಕೆ ಎಂದು ಬಿಜೆಪಿ ಕಚೇರಿಯಲ್ಲಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಧರ್ಮಸ್ಥಳ ಕುರಿತು ಹೇಳಿಕೆ ನೀಡಿದ ವಿಚಾರವಾಗಿ ಮಾತನಾಡಿ ಡಿಕೆಶಿಯವರ ಹೇಳಿಕೆಯನ್ನು ನಾವು ಸ್ವಾಗತ ಮಾಡ್ತೇವೆ. ಆದ್ರೆ ಅದೇ ಸಂದರ್ಭದಲ್ಲಿ ಸರ್ಕಾರ ಮೈಮರೆತರೆ ಏನಾಗುತ್ತೆ ಅನ್ನೋದೂ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಈ ತರಹ ಹೇಳಿಕೆ ಕೊಟ್ಟು ಎಲ್ಲದರಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಮುಸುಕುಧಾರಿ ಯಾರು? ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಮನಬಂದಂತೆ ಬರೆಯೋದು. ಇವರೇ ತನಿಖೆ ಮಾಡ್ತಾರೆ, ಇವರೇ ತೀರ್ಪು ಕೊಡ್ತಾರೆ. ಇದು ಭಕ್ತಾದಿಗಳಿಗೆ ನೋವು ತಂದಿದೆ. ಮಂಗಳೂರು ವಿಚಾರದಲ್ಲಿ ಸೋಷಿಯಲ್ ಮೀಡಿಯಾಗಳ ವಿರುದ್ಧ ಕೇಸ್ ಹಾಕಿದ್ರು. ಧರ್ಮಸ್ಥಳ ವಿರುದ್ಧವೂ ಅಪಪ್ರಚಾರ ನಡೀತಿದೆ. ಯಾಕೆ ಗೃಹ ಸಚಿವರು ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ತನಿಖೆ ಬೇಗ ಮುಗಿಸಲಿ, ತನಿಖೆಗೆ ಸಮಯ ನಿಗದಿ ಮಾಡಲಿ. ಯಾರ್ಯಾರು ಷಢ್ಯಂತ್ರದಲ್ಲಿ ಶಾಮೀಲಾಗಿದ್ದಾರೆ ಅಂತ ಡಿಕೆಶಿ ಹೇಳಲಿ. ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಯಾರಿದ್ದಾರೆ ಅಂತ ಬಯಲಿಗೆ ಎಳೆಯಲಿ. ಸರ್ಕಾರದ ಕರ್ತವ್ಯ ಏನು? ಯಾರದ್ದೇ ನಂಬಿಕೆಗೆ ಧಕ್ಕೆ ಬರದಂತೆ ಕಾಪಾಡಬೇಕು. ಸಂವಿಧಾನದ ಆಶಯಗಳನ್ನು ಕಾಪಾಡಬೇಕು. ಆ ಬುರುಡೆ ಹಿಡಿದು ಬಂದವನ ಹಿಂದೆ ಯಾರಿದ್ದಾರೆ? ಆತನ ಅರೋಪ ಎಷ್ಟು ಸತ್ಯ? ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದರು.
ಯಾವ ರೀತಿ ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ಸಮರ್ಥಿಸಿಕೊಂಡ್ರು ಕಾಂಗ್ರೆಸ್ ನವ್ರು? ಇಲ್ಲಿ ಆ ಸಮರ್ಥನೆ ಕಾಣ್ತಿಲ್ಲವಲ್ಲ. ಯಾರೂ ತನಿಖೆಗೆ ಅಡ್ಡಿಪಡಿಸಿಲ್ಲ, ಆದ್ರೆ ಕಾಲಮಿತಿಯಲ್ಲಿ ತನಿಖೆ ಮಾಡಿ. ಮುಸುಕುಧಾರಿ ವಿರುದ್ಧ ಹಾಗೂ ಅಪಪ್ರಚಾರಕರ ವಿರುದ್ಧ ಪ್ರತ್ಯೇಕ ತನಿಖೆ ಮಾಡಿ. ಯಾರ ಯಾರ ಕೈವಾಡ ಇದೆಯೋ ಬಯಲಿಗೆ ಎಳೆಯಲಿ ಎಂದು ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದರು.
