Ujire: ಕೊಟ್ಟ ಸಾಲವನ್ನು ಮರಳಿ ಕೊಡು ಎಂದು ಕೇಳಿದ ಮಹಿಳೆಗೆ ಥಳಿಸಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತ ಎಂದು ಹೇಳಲಾಗುತ್ತಿರುವ ನವೀನ್ ಕನ್ಯಾಡಿ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ನವೀನ್(Naveen) ಮತ್ತು ಟೈಲರಿಂಗ್ ನಡೆಸುವ ಮಹಿಳೆಯ ನಡುವೆ ಹಣಕಾಸಿನ ವ್ಯವಹಾರವೂ ಇದ್ದು, ಸಾಲ ಮರುಪಾವತಿಗೆ ಪಟ್ಟು ಹಿಡಿದುದಕ್ಕಾಗಿ ಮಹಿಳೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಆದರೆ ಹಲ್ಲೆ ಪ್ರಕರಣ ನಡೆದು ಎರಡು ದಿನಗಳು ಕಳೆದಿದ್ದರೂ ಮಹಿಳೆ ಯಾವುದೇ ದೂರನ್ನು ದಾಖಲಿಸಿರಲ್ಲಿ. ಕೊನೆಗೆ ಮಹಿಳೆಯು ಬೆಳ್ತಂಗಡಿ ಪೊಲೀಸರಿಗೆ(Belthangady Police) ದೂರು ನೀಡಿದ್ದು ತನ್ನಿಂದ ಏಳು ಲಕ್ಷ ಹಣವನ್ನು ಪಡೆದು ನವೀನ್ ವಂಚಿಸಿದ್ದಾನೆ, ಹಣ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.
ಅಲ್ಲದೆ ಅಂಗಡಿಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಗಳು ಎಲ್ಲೆಡೆ ವೈರಲ್ ಆದ ಬಳಿಕ ಬೆಳ್ತಂಗಡಿ ಶಾಸಕರ ಆಪ್ತ, ಆರೆಸ್ಸೆಸ್ ಕಾರ್ಯಕರ್ತ ನವೀನ್ ಕನ್ಯಾಡಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
