1
Tamilnadu: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಟಾಕಿ ಸಂಗ್ರಹಣಾ ಘಟಕದಲ್ಲಿ ಸ್ಫೋಟ ಉಂಟಾಗಿದ್ದು, ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ. ಗೋದಾಮು ಸಂಪೂರ್ಣ ನಾಶವಾಗಿದೆ. ಶಣ್ಮುಗಂ, ತಿರುಮಲರ್, ಮಂಜು ಮೃತರು. ಗೋದಾಮಿನಲ್ಲಿ ಇವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಉಂಟಾಗಿದೆ.
ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿಯು ರಕ್ಷಣಾಕಾರ್ಯ ಮುಂದುವರಿಸಿದ್ದು, ಶವಗಳನ್ನು ಹೊರತೆಗೆದಿದ್ದಾರೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ದು, ದುಃಖತಪ್ತ ಕುಟುಂಬಗಳಿಗೆ ನಾಲ್ಕು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
