Home » ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ವತಿಯಿಂದ ಉಜಿರೆ ಗ್ರಾಮ ಸಮಿತಿಯ ಸಭೆ ಹಾಗು ಸಹಾಯ ಹಸ್ತ ಕಾರ್ಯಕ್ರಮದ ಮಾಹಿತಿ ಕಾರ್ಯಕ್ರಮ

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ವತಿಯಿಂದ ಉಜಿರೆ ಗ್ರಾಮ ಸಮಿತಿಯ ಸಭೆ ಹಾಗು ಸಹಾಯ ಹಸ್ತ ಕಾರ್ಯಕ್ರಮದ ಮಾಹಿತಿ ಕಾರ್ಯಕ್ರಮ

by Praveen Chennavara
0 comments

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ವತಿಯಿಂದ ಉಜಿರೆ ಗ್ರಾಮ ಸಮಿತಿಯ ಸಭೆ ಹಾಗು ಸಹಾಯ ಹಸ್ತ ಕಾರ್ಯಕ್ರಮದ ಮಾಹಿತಿ ಕಾರ್ಯಕ್ರಮ 26/08/2021 ರಂದು ಉಜಿರೆಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರುಗಿತು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರ ನಿರ್ದೇಶನದಂತೆ ಪ್ರತೀ ಗ್ರಾಮ ಮಟ್ಟದಲ್ಲು ಕೋವಿಡ್ ಸಹಾಯ ಹಸ್ತ ಎಂಬ ಕಾರ್ಯಕ್ರಮದ ಅನುಷ್ಠಾನ ಮಾಡಿದ್ದು ಅದರ ಮಾಹಿತಿಯನ್ನ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀ ರಂಜನ್ ಜಿ ಗೌಡರವರು ನೀಡಿದರು.
ಈ ಸಭೆಯಲ್ಲಿ ಕೊರೊನ ದಿಂದ ಪಾಸಿಟಿವ್ ಹಾಗೂ ಮೃತರ ಕುಟುಂಬಗಳಿಗೆ ಬೂತ್ ಸಮಿತಿ ಯ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ಶ್ರೀ ರಂಜನ್ ಗೌಡ, ಉಜಿರೆ ಗ್ರಾಮ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್, ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರಾದ ಶುಭಿತ್ ಕುಮಾರ್, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಧರ ಪೂಜಾರಿ, ಮುಖಂಡರಾದ ಬಾಲಕೃಷ್ಣ ಗೌಡ ,ಪ್ರೇಮ್, ಶರೀಫ್, ಅಶ್ರಫ್, ನಾಗವೇಣಿ,ಜನೆಟ್ ಪಿಂಟೋ, ಅರುಣ್ ಕುಮಾರ್, ಶೋಬಾ,ಶೀನ ನಾಯ್ಕ, ಇಲಿಯಾಸ್, ರಜತ್ ಗೌಡ, ಗುರುರಾಜ್ ಗೌಡ ಮತ್ತು ಇತರ ನಾಯಕರು ಮತ್ತು ಕಾರ್ಯಕರ್ತರು ಹಾಜರಿದ್ದರು.

You may also like

Leave a Comment