Ahmadabad: ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಈ ನಡುವೆ ವಿಮಾನದ ಬಾಲದೊಳಗೆ ಗಗನಸಕಿ ಒಬ್ಬರ ಶವಪತ್ತೆಯಾಗಿದೆ.
ಹೌದು, ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ ಬಳಿಕ ವಿಮಾನದ ಅವಶೇಷಗಳ ತೆರವು ಕಾರ್ಯ ನಡೆಯುತ್ತಿತ್ತು. ಅಂತೆಯೇ ಬಿ.ಜೆ ಮೆಡಿಕಲ್ ಹಾಸ್ಟೆಲ್ ಮೇಲೆ ಸಿಲುಕಿದ್ದ ಏರ್ ಇಂಡಿಯಾ ವಿಮಾನದ ಬಾಲವನ್ನು ಶನಿವಾರ ತೆರವುಗೊಳಿಸಲಾಗಿದೆ. ಈ ಬಾಲದೊಳಗೆ ಗಗನಸಖಿಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ)ಯ ಮೂಲಗಳು ತಿಳಿಸಿವೆ.
ಯಾರೂ ತಲುಪಲಾಗದ ಭಾಗದಲ್ಲಿ ಆಕೆಯ ದೇಹವಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ವೇಳೆ ಶವ ದೊರೆತಿಲ್ಲ. ಬಳಿಕ ತನಿಖೆ ವೇಳೆ ಎನ್‌ಎಸ್‌ಜಿ ಇದನ್ನು ಗಮನಿಸಿದೆ ಎಂದು ಮೂಲಗಳು ತಿಳಿಸಿವೆ.
