Home » Crime: ಬಾಲಿವುಡ್‌ ನಟಿ ಹುಮಾ ಖುರೇಶಿ ಸಹೋದರನ ಬರ್ಬರ ಹತ್ಯೆ!

Crime: ಬಾಲಿವುಡ್‌ ನಟಿ ಹುಮಾ ಖುರೇಶಿ ಸಹೋದರನ ಬರ್ಬರ ಹತ್ಯೆ!

0 comments

Crime: ಹಿಂದಿಯ ಜನಪ್ರಿಯ ನಟಿ ಹುಮಾ ಖುರೇಷಿ ಅವರ ಸಹೋದರ ಆಸಿಫ್ ಖುರೇಷಿ ಅವರು ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿ ನಡೆದ ಜಗಳದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ಸ್ಕೂಟಿ ಪಾರ್ಕಿಂಗ್ ವಿಚಾರದಲ್ಲಿ ಜಗಳ ನಡೆದು ಆಸಿಫ್ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆಸಿಫ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರು ಇಬ್ಬರು ಆರೋಪಿಗಳನ್ನು ಅಲ್ಪಾವಧಿಯಲ್ಲಿಯೇ ಬಂಧಿಸಿದ್ದಾರೆ. ಗುರುವಾರ ನಿಜಾಮುದ್ದೀನ್‌ನ ಜಂಗ್‌ಪುರ ಭೋಗಲ್‌ ಬಜಾ‌ರ್ ಲೇನ್‌ನಲ್ಲಿ ರಾತ್ರಿ 11 ಗಂಟೆ ವೇಳೆಗೆ ಘಟನೆ ನಡೆದಿದೆ. ಮನೆಯ ಗೇಟ್‌ನಿಂದ ಸ್ಕೂಟಿಯನ್ನು ತೆಗೆದು ಪಕ್ಕದಲ್ಲಿ ಇಡುವಂತೆ ಆಸಿಫ್ ಕೇಳಿಕೊಂಡರು. ಅದಕ್ಕಾಗಿ ಆರೋಪಿಗಳು ನಟಿಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಆಸಿಫ್ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಮತ್ತು ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Marriage: 25 ವರ್ಷದ ಮೊಮ್ಮಗಳು ದೊಡ್ಡವಳಾದ ಕೂಡಲೇ, ಮದುವೆಯಾದ 70 ವರ್ಷದ ಅಜ್ಜ!

You may also like