Home » ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಸೋದರ ಸಂಬಂಧಿ ಶವ ಪತ್ತೆ ! ಆತ್ಮಹತ್ಯೆ ಶಂಕೆ

ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಸೋದರ ಸಂಬಂಧಿ ಶವ ಪತ್ತೆ ! ಆತ್ಮಹತ್ಯೆ ಶಂಕೆ

0 comments

ಮುಂಬೈ : ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಸೋದರ ಸಂಬಂಧಿ ಜೇಸನ್ ಸವಿಯೋ‌ ವಾಟ್ಕಿನ್ಸ್ ಅವರ ಶವ ಅವರ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ಎಂದು ಅಂದಾಜಿಸಲಾಗುತ್ತಿದೆ.

ಸುಮಾರು 12 ಗಂಟೆಯ ಅಂದಾಜಿಗೆ, ಅಂಧೇರಿ ಪಶ್ಚಿಮದ ಯಮುನಾ ನಗರದಲ್ಲಿನ ಫ್ಲ್ಯಾಟ್ ಸಂಖ್ಯೆ 302 ರಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡಿದ್ದಾನೆ ಎಂದು ಮಾಹಿತಿ ಬಂದು, ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ನಂತರ ಮೃತರನ್ನು ರೆಮೋ ಡಿಸೋಜಾ ಅವರ ಸೋದರ ಸಂಬಂಧಿ ಜೇಸನ್ ಎಂದು ಗುರುತಿಸಲಾಗಿತ್ತು. ಪೊಲೀಸರು ಕೂಡಲೇ ಅವರನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿದ್ದ ವೈದ್ಯರ ತಂಡ ಜೇಸನ್ ಮೃತಪಟ್ಟಿರುವುದಾಗಿ ಘೋಷಿಸಿದರು.

ಜೇಸನ್ ಗಾಂಜಾ ಚಟ ಹೊಂದಿದ್ದಾಗಿ ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ತಾಯಿಯ ಮರಣಾನಂತರ ಜೇಸನ್ ತೀವ್ರ ಆಘಾತಕ್ಕೊಳಗಾಗಿ, ನಂತರ ಈ ಗಾಂಜಾ ಚಟವನ್ನು ಬೆಳೆಸಿಕೊಂಡಿದ್ದರು.

ಜೇಸನ್ ಅವರ ತಂದೆ ಡೆಸ್ಮಂಡ್ ಸಿರಿಲ್ ಡನ್ ಸ್ಟಾನ್ ಮತ್ತು ಸಹೋದರಿ ಲಿಜಿ ರೆಮೊ ಡಿಸೋಜಾ ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಜೇಸನ್ ಅವರ ತಾಯಿ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದು, ನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದು ಈ ಕಾರಣದಿಂದ ಗಾಂಜಾ ವ್ಯಸನಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜೇಸನ್ ತಂದೆ ಹೇಳಿಕೆಯನ್ನು ದಾಖಲಿಸಲಾಗಿದೆ.

ಪೊಲೀಸರು ಜೇಸನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

You may also like

Leave a Comment