Home » Rashmika Mandanna: ರಣಬೀರ್​-ರಶ್ಮಿಕಾ ಮಂದಣ್ಣ ಲಿಪ್‌ಲಾಕ್‌​! ಬಾಲಿವುಡ್‌ ಸ್ಟೈಲ್‌ ಕಿಸ್‌, ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಬೋಲ್ಡ್‌!!!

Rashmika Mandanna: ರಣಬೀರ್​-ರಶ್ಮಿಕಾ ಮಂದಣ್ಣ ಲಿಪ್‌ಲಾಕ್‌​! ಬಾಲಿವುಡ್‌ ಸ್ಟೈಲ್‌ ಕಿಸ್‌, ರೊಮ್ಯಾನ್ಸ್‌ಗೆ ಫ್ಯಾನ್ಸ್‌ ಫುಲ್‌ ಬೋಲ್ಡ್‌!!!

by Mallika
1 comment
Rashmika Mandanna

Rashmika Mandanna: ನ್ಯಾಷನಲ್‌ ಕ್ರಷ್‌ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಬಹುನಿರೀಕ್ಷಿತ ಬಾಲಿವುಡ್‌ ಚಿತ್ರ ನಟ ರಣಬೀರ್‌ ಕಪೂರ್‌ (Ranbir Kapoor) ಜೊತೆ ನಟಿಸಿದ ಅನಿಮಲ್‌ (Animal) ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಭಾರೀ ಸಂಚಲನ ಮೂಡಿಸಿತ್ತು. ಅನಂತರ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ರಿಲೀಸ್‌ ಆಗಿತ್ತು, ಇದೀಗ ಸಿನಿಮಾದ ಪೋಸ್ಟರ್‌ವೊಂದನ್ನು ಸಿನಿಮಾ ತಂಡ ರಿಲೀಸ್‌ ಮಾಡಿದೆ. ಇದು ಸಖತ್‌ ವೈರಲ್‌ ಆಗಿದೆ.

ಸಿನಿಮಾದ ಹಾಡು ಬಿಡುಗಡೆಯಾಗಲಿದ್ದು ಇದರ ಮಾಹಿತಿ ಹಂಚಿಕೊಂಡಿರುವ ಈ ಪೋಸ್ಟರ್‌ ನಲ್ಲಿ ರಣಬೀರ್‌ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಲಿಪ್‌ಕಿಸ್‌ನಲ್ಲಿ ತೊಡಗಿರುವ ದೃಶ್ಯ ಪೋಸ್ಟರ್‌ನಲ್ಲಿದೆ ಇದೆ. ಹೆಲಿಕಾಪ್ಟರ್‌ ಒಂದರ ಒಳಗೆ ಕುಳಿತಿರುವ ಇಬ್ಬರು ಕಿಸ್‌ ಮಾಡುವ ಚಿತ್ರ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ರಶ್ಮಿಕಾ ವಿಜಯ್‌ದೇವರಕೊಂಡ ಅವರ ಜೊತೆ ಲಿಪ್‌ಕಿಸ್‌ ಸೀನ್‌ನಲ್ಲಿ ನಟಿಸಿದ್ದರು.

ರಶ್ಮಿಕಾ ಅವರು ತಮ್ಮ ಸಿನಿಮಾದ ಈ ಪೋಸ್ಟರ್ ಅನ್ನು ಇಸ್ಟಾಗ್ರಾಮ್‌ನಲ್ಲಿ ರಿಲೀಸ್‌ ಮಾಡಿ, ಹಿಂದಿಯಲ್ಲಿ ʼಹುವಾ ಮೈನ್‌ʼ, ತೆಲುಗಿನಲ್ಲಿ ʼಅಮ್ಮಾಯಿʼ, ತಮಿಳಿನಲ್ಲಿ ʼನೀ ವಾಡಿʼ, ಮಲೆಯಾಳಂನಲ್ಲಿ ʼಪೆನ್ನಾಳೆʼ ಮತ್ತು ಕನ್ನಡದಲ್ಲಿ ʼಓ ಬಾಲೆʼ ಎನ್ನುವ ಹಾಡು ನಾಳೆ(ಅಕ್ಟೋಬರ್‌ 11) ರಿಲೀಸ್‌ ಆಗಲಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ. ಅನಿಮಲ್‌ ಚಿತ್ರ ತಂದೆ-ಮಗನ ಸಂಬಂಧದ ಸುತ್ತ ಹೆಣೆದಿರುವ ಚಿತ್ರವಾಗಿದೆ. ಅನಿಲ್‌ ಕಪೂರ್‌ ತಂದೆಯಾಗಿ, ಸನ್ನಿ ಡಿಯೋಲ್‌ ಖಳನ ಪಾತ್ರದಲ್ಲಿ ಮಿಂಚಲಿದ್ದಾರೆ.

 

ಇದನ್ನು ಓದಿ: Interest Rate Hike: ತನ್ನ ಗ್ರಾಹಕರಿಗೆ ಬಿಗ್‌ ಶಾಕ್‌ ಕೊಟ್ಟ ಈ Bank! ಲಕ್ಷಾಂತರ ಗ್ರಾಹಕರೇ ನಿಮ್ಮ EMI ಹೆಚ್ಚಾಗಲಿದೆ!

You may also like

Leave a Comment