Home » ಲೋಕಸಭಾ ಚುನಾವಣೆಗೂ ಮುನ್ನ ಅಯೋಧ್ಯೆ ರಾಮ ಮಂದಿರದ ಮೇಲೆ ಬಾಂಬ್ ದಾಳಿ! ಹೊಂಚು ಹಾಕಿ ಕುಳಿತಿವೆ ಪಾಕಿಸ್ತಾನಿ ಉಗ್ರ ಸಂಘಟನೆಗಳು!!

ಲೋಕಸಭಾ ಚುನಾವಣೆಗೂ ಮುನ್ನ ಅಯೋಧ್ಯೆ ರಾಮ ಮಂದಿರದ ಮೇಲೆ ಬಾಂಬ್ ದಾಳಿ! ಹೊಂಚು ಹಾಕಿ ಕುಳಿತಿವೆ ಪಾಕಿಸ್ತಾನಿ ಉಗ್ರ ಸಂಘಟನೆಗಳು!!

0 comments

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯವಾಗಿ ನಿರ್ಮಾಣವಾಗುತ್ತಿರುವ ಮಂದಿರವು 2024ರ ಜನವರಿ 1 ರಿಂದ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಲಿದೆ ಎಂದು ಕೇಂದ್ರ ಸರಕಾರವು ಹೇಳಿದ ಬೆನ್ನಲ್ಲೇ ಇದೀಗ ರಾಮ ಮಂದಿರಕ್ಕೆ ಸಂಬಂಧಪಟ್ಟಂತೆ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ.

ಹೌದು ಕೇಂದ್ರ ಸರ್ಕಾರವು ಮಂದಿರವು ಯಾವಾಗ ಸಾರ್ವಜನಿಕರ ದರ್ಶನಕ್ಕೆ ತೆರೆದುಕೊಳ್ಳಲಿದೆ ಎಂಬುದನ್ನು ಸ್ಪಷ್ಟಪಡಿಸಿದ ಕೂಡಲೇ ರಾಮ ಮಂದಿರ ಗುರಿಯಾಗಿಸಿ ಆತ್ಮಾಹುತಿ ಅಥವಾ ಗುಂಡಿನ ದಾಳಿ ನಡೆಸಲು ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಹೊಂಚು ಹಾಕಿರುವುದು ಗುಪ್ತಚರ ಮೂಲಗಳಿಂದ ಬಯಲಾಗಿದೆ.

ಉಗ್ರ ಸಂಘಟನೆಯು ಈಗಾಗಲೇ ನೇಪಾಳ ಮೂಲದಿಂದ ಬಾಂಬ್‌, ಶಸ್ತ್ರಾಸ್ತ್ರ, ನಕಲಿ ಕರೆನ್ಸಿಗಳನ್ನು ಭಾರತಕ್ಕೆ ತರಲು ಯೋಜನೆ ಸಿದ್ಧಪಡಿಸಲಾಗಿದೆಯಂತೆ. ಮುಖ್ಯವಾಗಿ 2024ರ ಲೋಕಸಭೆ ಚುನಾವಣೆಗೂ ಮುನ್ನ ನೂತನ ರಾಮ ಮಂದಿರದ ಮೇಲೆ ದಾಳಿ ನಡೆಸಿ, ಆ ಮೂಲಕ ಕೋಮು ಸೌಹಾರ್ದತೆ ಕದಡುವುದು ಉಗ್ರರ ಉದ್ದೇಶವಾಗಿದೆ.

ಅಲ್ಲದೆ ಕೋಟ್ಯಾಂತರ ಹಿಂದೂ ಭಕ್ತರ, ಹಲವು ವರ್ಷಗಳ ಕನಸನ್ನು ನಾಶಮಾಡಿ, ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹೆಚ್ಚಿಸಿ, ವಿವಿಧ ರಾಜ್ಯಗಳಲ್ಲಿ ದಂಗೆಗೆ ಕುಮ್ಮಕ್ಕು ನೀಡಲು ಸತತ ಯತ್ನವನ್ನು ಉಗ್ರ ಸಂಘಟನೆಗಳು ನಡೆಸುತ್ತಿವೆ ಎಂದು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈ ಸಂಬಂಧ ಗೌಪ್ಯ ವರದಿಯನ್ನು ಅಧಿಕಾರಿಗಳು ಕೇಂದ್ರ ಸರಕಾರಕ್ಕೆ ರವಾನಿಸಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಲಷ್ಕರ್ ಎ ತಯಬಾ (ಎಲ್‌ಇಟಿ) ಹಾಗೂ ಜೈಷ್-ಎ- ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗಳಿಗೆ ಮಂದಿರದ ಮೇಲೆ ದಾಳಿಯ ಟಾರ್ಗೆಟ್‌ ನೀಡಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಮ ಮಂದಿರ ಹಾಗೂ ಅದರ ಸುತ್ತ ಮುತ್ತ ಹೆಚ್ಚಿನ ಭದ್ರತೆಯನ್ನು ನೀಡಿ ಸದಾ ಅಲರ್ಟ್ ಆಗಿರುವಂತೆ ಕೇಂದ್ರವು ಸೂಚಿಸಿದೆ ಎಂದು ವರದಿಯಾಗಿದೆ.

You may also like

Leave a Comment