Home » Bomb Blast: ಪಾಕಿಸ್ತಾನದಲ್ಲಿ ಮಕ್ಕಳು ‘ಬಾಂಬ್’ ಜತೆ ಆಟವಾಡುತ್ತಿದ್ದಾಗ ಸ್ಫೋಟ – ಐವರು ಸಾವು, 12 ಮಂದಿ ಗಾಯ

Bomb Blast: ಪಾಕಿಸ್ತಾನದಲ್ಲಿ ಮಕ್ಕಳು ‘ಬಾಂಬ್’ ಜತೆ ಆಟವಾಡುತ್ತಿದ್ದಾಗ ಸ್ಫೋಟ – ಐವರು ಸಾವು, 12 ಮಂದಿ ಗಾಯ

0 comments

Bomb Blast: ಪಾಕಿಸ್ತಾನದ ಖೈಬರ್ ಪುಂಖ್ಯಾದಲ್ಲಿ, ಕೆಲವು ಮಕ್ಕಳು ಆಟವಾಡುತ್ತಿದ್ದಾಗ ಹಳೆಯ ಮಾರ್ಟರ್ ಶೆಲ್ (ಒಂದು ರೀತಿಯ ಬಾಂಬ್) ಸ್ಫೋಟಗೊಂಡಿದೆ. ಈ ಅವಘಡದಲ್ಲಿ 5 ಮಕ್ಕಳು ಸಾವನ್ನಪ್ಪಿ, 12 ಜನರು ಗಾಯಗೊಂಡಿದ್ದಾರೆ. ಮಕ್ಕಳಿಗೆ ಬೆಟ್ಟದಲ್ಲಿ ಈ ಸ್ಪೋಟಗೊಳ್ಳದ ಶೆಲ್ ಸಿಕ್ಕಿದ್ದು, ಅದನ್ನು ತಮ್ಮ ಗ್ರಾಮಕ್ಕೆ ತಂದಿದ್ದರು.

ಪೊಲೀಸರ ಪ್ರಕಾರ, ಮಕ್ಕಳಿಗೆ ಅದು ಬಾಂಬ್ ಎಂದು ತಿಳಿದಿರಲಿಲ್ಲ. ಗಾಯಗೊಂಡಿರುವ ಅನೇಕ ಮಕ್ಕಳ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸ್ಫೋಟದ ನಂತರ, ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಮೃತರು ಮತ್ತು ಗಾಯಾಳುಗಳನ್ನು ಹತ್ತಿರದ ನಗರ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯ ವಕ್ತಾರರ ಪ್ರಕಾರ, ಗಾಯಗೊಂಡ ಮಕ್ಕಳಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಈ ಅಪಘಾತವು ಪ್ರದೇಶದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.

You may also like