Operation sindoor: ಭಾರತೀಯ ಸೇನೆ ಬುಧವಾರ ಬೆಳಗಿನ ಜಾವ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಸೇನೆಯೊಂದಿಗೆ ಭಾರತೀಯ ವಾಯುಪಡೆಯೂ ಭಾಗವಹಿಸಿದ್ದ ಈ ಮಧ್ಯರಾತ್ರಿಯ ದಾಳಿ ಪಾಕಿಸ್ತಾನವನ್ನು ನಿದ್ರೆಯಿಂದ ಬೆಚ್ಚಿಬೀಳುವಂತೆ ಮಾಡಿದೆ. ಭಾರತ ತೀವ್ರವಾದ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ, ಭದ್ರತಾ ಆತಂಕ ಮತ್ತಷ್ಟು ಗಂಭೀರಗೊಂಡಿದೆ.
ಈ ನಡುವೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ಗೆ ‘ಪಾಕಿಸ್ತಾನಿ ಜೆಕೆ’ ಎಂಬ ನಾಮದಿಂದ ಇಮೇಲ್ ಬಂದಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆಯುಳ್ಳ ಸಂದೇಶ ಕಳುಹಿಸಲಾಗಿದೆ.
ತಕ್ಷಣವೇ ಅಹಮದಾಬಾದ್ ಪೊಲೀಸ್ ಇಲಾಖೆ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಕ್ರೀಡಾಂಗಣದಲ್ಲಿ ತೀವ್ರ ತಪಾಸಣೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಆದರೆ ಈ ಬೆದರಿಕೆಯಿಂದ ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗಿಗೊಳಿಸಲಾಗಿದೆ.
