Home » Bomb Threat E-mail: ಉಡುಪಿಯ ವಸತಿ ಶಾಲೆಗೆ ಬಾಂಬ್‌ ಬೆದರಿಕೆ

Bomb Threat E-mail: ಉಡುಪಿಯ ವಸತಿ ಶಾಲೆಗೆ ಬಾಂಬ್‌ ಬೆದರಿಕೆ

0 comments

Bomb Threat E-mail: ಉಡುಪಿಯ ವಸತಿ ಶಾರದಾ ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ ಬಂದಿರುವ ಘಟನೆಯೊಂದು ನಡೆದಿದೆ. ಉಡುಪಿ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮೇಲ್‌ ಸಂದೇಶ ಕಂಡು ಶಾಲೆಯ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ.

ಸ್ಥಳಕ್ಕೆ ಶ್ವಾನದಳ ಆಗಮಿಸಿದ್ದು, ಶಾಲೆಯ ಮೂಲೆ ಮೂಲೆಯಲ್ಲಿ ಹುಡುಕಾಟ ಮಾಡಿದೆ. ಇನ್ನು ಬಾಂಬ್‌ ಬೆದರಿಕೆ ಸಂದೇಶ ವಿಚಾರ ತಿಳಿದು ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಓಡೋಡಿ ಬಂದಿದ್ದು, ಶಾಲೆಯ ಎದುರು ನಿಂತಿದ್ದಾರೆ.

ಅಂದ ಹಾಗೆ ಈ ಶಾರದಾ ಶಾಲೆಯಲ್ಲಿ ರಾಜ್ಯದ ನಾನಾ ಭಾಗದಿಂದ, ಅಂತರರಾಜ್ಯದಿಂದ ಬಂದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

You may also like