Home » Dharmasthala Burial Case: ಧರ್ಮಸ್ಥಳ ಪ್ರಕರಣ : ಆರನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆ – ಸಿಎಂಗೆ ಮಾಹಿತಿ ನೀಡಿದ ಡಿಜಿಐಜಿ ಸಲೀಂ

Dharmasthala Burial Case: ಧರ್ಮಸ್ಥಳ ಪ್ರಕರಣ : ಆರನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆ – ಸಿಎಂಗೆ ಮಾಹಿತಿ ನೀಡಿದ ಡಿಜಿಐಜಿ ಸಲೀಂ

0 comments

Dharmasthala Burial Case: ಧರ್ಮಸ್ಥಳ ಶವಗಳ ಹೂತಿರುವ ಪ್ರಕರಣ ಸಂಬಂಧ ಕಳೆದ 4-5 ದಿನಗಳಿಂದ ಎಸ್ಐಟಿ ತಂಡ ನಡೆಸುತ್ತಿರುವ ಉತ್ಖನನ ಕಾರ್ಯದಲ್ಲಿ ನಿನ್ನೆ ಆರನೇ ಪಾಯಿಂಟ್ನಲ್ಲಿ ಒಂದಷ್ಟು ಮೂಳೆಗಳ ತುಂಡು ಹಾಗೂ ಬುರುಡೆಯ ತುಂಡು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಲು ಡಿಜಿಐಜಿ ಸಲೀಂ ಅವರನ್ನು ಭೇಟಿಯಾಗಿದ್ದಾರೆ.

ಇಂದು ಮುಂಜಾನೆ ಸಿಎಂ ನಿವಾಸಕ್ಕೆ ಆಗಮಿಸಿದ ಡಿಜಿಐಜಿ ಸಲೀಂ ಅವರಿಗೆ ನಿನ್ನೆ ಧರ್ಮಸ್ಥಳದಲ್ಲಿ ನಡೆದ ಕಾರ್ಯಚರಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಧರ್ಮಸ್ಥಳ ಪ್ರಕರಣ ಸಂಬಂಧ ಪ್ರತಿದಿನ ಮಾಹಿತಿಯನ್ನು ಡಿಜಿಐಜಿ ಸಲೀಂ ಅವರಿಂದ ಪಡೆಯುತ್ತಿದ್ದಾರೆ.

ಡಿಜಿಐಜಿ ಸಲೀಂ ನೀಡಿತ್ತಿರುವ ಮಾಹಿತಿಯಂತೆ ಎಸ್ಐಟಿ ತಂಡಕ್ಕೆ ಬೇಕಾದ ಸೌಕರ್ಯಗಳನ್ನು ಸರ್ಕಾರ ನೀಡುತ್ತಿದೆ. ಇದರ ಹಿನ್ನೆಲೆಯಲ್ಲೇ ಮೊನ್ನೆ ತಂಡಕ್ಕೆ ಹೆಚ್ಚುವರಿ 9 ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಅಲ್ಲದೆ ನಿನ್ನೆ ಎಸ್ಐಟಿ ತಂಡ ಸಹಾಯವಾಣಿಯನ್ನು ಆರಂಭಿಸಿತ್ತು. ಅಲ್ಲದೆ ಪಾಯಿಂಟ್ 13ಕ್ಕೆ ಇದೀಗ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಹಾಗೂ ಹೆಚ್ಚುವರಿಯಾಗಿ ರಾತ್ರಿ ಇನ್ನಷ್ಟು ಪೊಲೀಸರನ್ನು ಗಸ್ತಿಗೆ ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ,.

ಇದನ್ನೂ ಓದಿ: Viral Video: ನೋಡ ನೋಡುತ್ತಿದ್ದಂತೆ ಮುರಿದು ಬಿತ್ತು 360 ಡಿಗ್ರಿಯ ಬೃಹತ್ ಜೋಕಾಲಿ – ಭಯಾನಕ ವಿಡಿಯೋ ವೈರಲ್

You may also like