Home » Boyfriend: ವರ್ಷಗಳ ನಂತರ ಭೇಟಿಯಾದ ಪ್ರೇಮಿ ಜೊತೆಗೆ ರೂಮ್ ಬುಕ್ ಮಾಡಿ ಲೈಂಗಿಕ ಮಿಲನ: 90 ನಿಮಿಷದಲ್ಲಿ ಯುವತಿ ಸಾವು

Boyfriend: ವರ್ಷಗಳ ನಂತರ ಭೇಟಿಯಾದ ಪ್ರೇಮಿ ಜೊತೆಗೆ ರೂಮ್ ಬುಕ್ ಮಾಡಿ ಲೈಂಗಿಕ ಮಿಲನ: 90 ನಿಮಿಷದಲ್ಲಿ ಯುವತಿ ಸಾವು

0 comments

Boyfriend: ಎರಡು ವರ್ಷಗಳ ನಂತರ ಭೇಟಿಯಾದ ಪ್ರೇಮಿಗಳು, ರೂಮ್ ಬುಕ್ ಮಾಡಿ ದೀರ್ಘ ಲೈಂಗಿಕ ಕ್ರಿಯೆ ನಡೆಸಿದ್ದು, ಈ ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ.

ಹೌದು, ಅಕ್ಟೊಬರ್ 1 ರಂದು ಗುಜರಾತ್‌ನಲ್ಲಿ ಹೋಟೆಲ್‌ವೊಂದರಲ್ಲಿ (Hotel) 23 ವರ್ಷದ ಯುವತಿಯೊಬ್ಬಳು ತನ್ನ 26 ವರ್ಷದ ಗೆಳೆಯನೊಂದಿಗೆ ಲೈಂಗಿಕ ಕ್ರಿಯೆ ಮಾಡಿದ ಬಳಿಕ ಹೆಚ್ಚಿನ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ (Gujarat) ನಡೆದಿದೆ .

ಮಾಹಿತಿ ಪ್ರಕಾರ, ಯುವತಿಯು ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದು, ಪ್ರೀತಿಸುತ್ತಿದ್ದ (Love) ಗೆಳೆಯನೊಂದಿಗೆ ಲೈಂಗಿಕ ಕ್ರಿಯೆ ಬಯಕೆ ತೀರಿಸಿಕೊಳ್ಳಲು ತನ್ನ ಪ್ರೇಮಿ ಜೊತೆಗೆ ಹೋಟೆಲ್‌ವೊಂದಕ್ಕೆ ತೆರಳಿದ್ದಳು. ರೂಮ್ ಸೇರಿದ್ದೇ ತಡ ಇಬ್ಬರು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಆದ್ರೆ ಈ ವೇಳೆ ಆಕೆಯ ಗುಪ್ತಾಂಗದಲ್ಲಿ ರಕ್ತಸ್ರಾವ ಶುರುವಾಗಿತ್ತು. ಗುಪ್ತಾಂಗದಲ್ಲಿ ರಕ್ತಸ್ರಾವವಾಗುತ್ತಿದ್ದರೂ ಮತ್ತಷ್ಟು ಬಲವಾಗಿ ಸಂಭೋಗಕ್ಕೆ ಪ್ರಯತ್ನಿಸುತ್ತಿದ್ದ. ಬಳಿಕ ಬಟ್ಟೆಯನ್ನು ಬಳಸಿ ನಿಲ್ಲಿಸಲು ಪ್ರಯತ್ನಿಸಿದ್ದ. ಆದ್ರೆ ಅದು ಪ್ರಯೋಜನಕ್ಕೆ ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಯುವತಿ ಮೋರ್ಛೆ ಹೋಗಿದ್ದಳು.

ಆದ್ರೆ ಆಕೆ ಗೆಳೆಯ ಕೂಡಲೇ ವೈದ್ಯಕೀಯ ಸಹಾಯ ಪಡೆಯದೇ ಆನ್‌ಲೈನ್‌ನಲ್ಲಿ ಸೊಲ್ಯೂಷನ್ ಹುಡುಕಿದ್ದ. ನಂತರ ಸ್ನೇಹಿತರೊಬ್ಬರಿಗೆ ಕರೆ ಮಾಡಿ, ಆಕೆಯನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದ, ಅಲ್ಲಿಂದ ಪುನಃ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ. ಅಷ್ಟರಲ್ಲಿ ತೀರಾ ರಕ್ತ ಸ್ರಾವ ಆಗಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಅತಿಯಾದ ರಕ್ತಸ್ರಾವದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವಿಧಿವಿಜ್ಞಾನ ವರದಿ ಹೇಳಿದೆ. ಇನ್ನು ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಖಾಸಗಿ ಭಾಗಗಳಲ್ಲಿ ಗಂಭೀರ ಗಾಯಗಳಾಗಿರುವುದನ್ನು ವರದಿ ಬಹಿರಂಗಪಡಿಸಿದೆ. ಇದೇ ಸಾವಿಗೆ ಕಾರಣ ಎಂದೂ ಉಲ್ಲೇಖಿಸಲಾಗಿದೆ. ಅಷ್ಟು ಮಾತ್ರ ಅಲ್ಲದೇ ಹೋಟೆಲ್‌ನಿಂದ ಹೊರಡುವ ಮೊದಲು, ಸಾಕ್ಷ್ಯ ನಾಶಪಡಿಸಲು ಗೆಳೆಯ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರಣಕ್ಕೆ ಇದೀಗ ಯುವತಿ ಸಾವಿನ ಬಳಿಕ ಯುವಕನನ್ನ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105 ಮತ್ತು 238 ಅಡಿಯಲ್ಲಿ ಬಂಧಿಸಲಾಗಿದೆ.

You may also like

Leave a Comment