Madikeri: ಹಲವು ಕಂಪನಿಗಳು ಮಾರಾಟ ಮಾಡುತ್ತಿರುವ ವಾಟರ್ ಬಾಟಲ್ನಲ್ಲಿರುವ ನೀರು ಕೂಡ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಕರ್ನಾಟಕ ರಾಜ್ಯ ಆಹಾರ ಇಲಾಖೆ ಕಾರ್ಯಾಚರಣೆ ನಡೆಸಿ ಒಳಪಡಿಸಿದ ಪ್ರಯೋಗಾಲಯ ಪರೀಕ್ಷೆಯಿಂದ ತಿಳಿದು ಬಂದಿದೆ.
ಈ ಪೈಕಿ ಕೊಡಗಿನಿಂದ (Madikeri) ಸರಬರಾಜು ಆಗುವ “ಕೂರ್ಗ್ ಅಕ್ವಾ” ನೀರಿನ ಬಾಟಲ್ ಕಳಪೆ ಗುಣಮಟ್ಟದಿಂದ ಕೂಡಿದ್ದು ಇದನ್ನು ಸೇವಿಸಿದರೆ ಆರೋಗ್ಯಕ್ಕೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ವರದಿ ತಿಳಿಸಿದೆ. ಅಲ್ಲದೇ ಕೋಲಾರದ ಲಿಮ್ರಾ ಅಕ್ವಾ, ಯಾದಗಿರಿಯ ಬೆಸ್ಟಾರ್ನ್, ಗದಗದ ಕಾಸ್ಕ್ಯಾಡ್, ಬೀದರ್ ಸಾಯಿ ಜಲ್ ಅಕ್ವಾ, ವಿಜಯನಗರದ ಪ್ಲೇರ್, ಚಿತ್ರದುರ್ಗದ ಎಸ್ ಎಸ್ ಕಂಪನಿಗಳ ಬಾಟಲ್ ವಾಟರ್ ಹಾನಿಕಾರಕ ಎಂದು ಗುರುತಿಸಲಾಗಿದೆ.
ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ವರದಿ ತಿಳಿಸಿದೆ.
