Home » Bantwala: ಬಂಟ್ವಾಳದಲ್ಲಿ ಬೌಬೌ ಶವರ್ಮಾ ಸ್ಪೆಷಲ್! ತಿನ್ನುವಾಗ ಎಚ್ಚರವಾಗಿರಿ

Bantwala: ಬಂಟ್ವಾಳದಲ್ಲಿ ಬೌಬೌ ಶವರ್ಮಾ ಸ್ಪೆಷಲ್! ತಿನ್ನುವಾಗ ಎಚ್ಚರವಾಗಿರಿ

0 comments

Bantwala: ದೇಶದೆಲ್ಲೆಡೆ ಬೌಬೌ ಬಿರಿಯಾನಿ ಬೆನ್ನಲ್ಲೇ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ದಲ್ಲಿ ಬೌ ಬೌ ಶವರ್ಮಾ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಂಟ್ವಾಳ ತಾಲೂಕಿನ ಪುದು ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಬನ್ ಬೈಟ್ಸ್ ಎಂಬಲ್ಲಿ ಗ್ರಾಹಕರಿಗಾಗಿ ತಯಾರಿಸಿಟ್ಟ ಶವರ್ಮಾ ವನ್ನು ಬೀದಿ ನಾಯೊಂದು ಎಳೆದು ಎಳೆದು ತಿನ್ನೋ ವಿಡಿಯೋ ಒಂದು ವೈರಲ್ ಆಗಿದೆ.

ಹೌದು,ಶಾಪ್ ನ ಸಿಬ್ಬಂದಿ ಹೊರಗಡೆ ಶವರ್ಮಾ ಇಟ್ಟು ಒಳಗಡೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾಯಿ ಶವರ್ಮಾ ಕ್ಕೆ ಬಾಯಿ‌ ಹಾಕಿ ನೆಕ್ಕಿದೆ, ಬೇಕಾದಷ್ಟು ತಿಂದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬೌ ಬೌ ಶವರ್ಮಾ ಎನ್ನುವ ಟೈಟಲ್ ನಲ್ಲಿ ಈ ವಿಚಾರ ಹರಿದಾಡಲಾರಂಭಿಸಿದೆ.

You may also like