Home » Heart Attack : ಹೃದಯಾಘಾತಕ್ಕೆ 6ನೇ ತರಗತಿ ಬಾಲಕ ಸಾವು!

Heart Attack : ಹೃದಯಾಘಾತಕ್ಕೆ 6ನೇ ತರಗತಿ ಬಾಲಕ ಸಾವು!

0 comments

ಇತ್ತೀಚೆಗೆ ಹೃದಯಾಘಾತ ವಯಸ್ಸು ನೋಡದೇ ಬರುವಂಥದ್ದು. ಯಾರಿಗೆ ಯಾವಾಗ ಯಾವ ಸಮಯದಲ್ಲಿ ಬರುತ್ತೆ ಎನ್ನುವುದು ಊಹಿಸಲು ಅಸಾಧ್ಯವಾಗಿ ಬಿಟ್ಟಿದೆ. ಇದೀಗ ಇದಕ್ಕೆ ಪೂರಕವಾಗಿ ಘಟನೆಯೊಂದು ನಡೆದಿದೆ. 12 ವರ್ಷದ ಬಾಲಕನೊಬ್ಬ ಹೃದಯಾಘಾತಕ್ಕೆ ಸಾವು ಕಂಡಿದ್ದಾನೆ.

ಹೃದಯಾಘಾತಕ್ಕೆ ಇದೀಗ ಮತ್ತೊಂದು ಜೀವ ಬಲಿಯಾಗಿದ್ದು, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರಿನ ಬಾಲಕ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ.

6ನೇ ತರಗತಿಯ ವಿದ್ಯಾರ್ಥಿ ಕೀರ್ತನ್ (12) ಎಂಬಾತ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಬಾಲಕ ಜ.7 ರಂದು (ನಿನ್ನೆ) ರಾತ್ರಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ, ಇದರಿಂದ ಭಯಭೀತರಾದ ಆತನ ಪೋಷಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲೆತ್ನಿಸಿದ್ದಾರೆ.

ಆದರೆ ದುರಾದೃಷ್ಟವಶಾತ್ ಬಾಲಕ ದಾರಿ ಮಧ್ಯೆ ಅಸುನೀಗಿದ್ದಾನೆ. ತಮ್ಮ ಕಣ್ಣಮುಂದೆಯೇ ಮಗನ ಸಾವು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗನನ್ನು ಕಳೆದುಕೊಂಡ ಮನೆ ಸ್ಥಬ್ಧವಾಗಿದೆ.

You may also like

Leave a Comment