Viral Post : ತನ್ನ ಗೆಳತಿ ಒಬ್ಬಳು ಟ್ರಿಪ್ ಹೊರಟ ಸಂದರ್ಭದಲ್ಲಿ ಗೆಳೆಯನು ಆಕೆಯ ಮುಂದೆ ವಿಚಿತ್ರ ಬೇಡಿಕೆ ಇಟ್ಟಿದ್ದು ಅದನ್ನು ಕೇಳಿ ಯುವತಿಯು ಹೌಹಾರಿ ಹೋಗಿದ್ದಾಳೆ.
ಹೌದು, ಅಮೆರಿಕದ (America) ಯುವತಿಯೂ ಆಸ್ಟ್ರೇಲಿಯಾ ಟ್ರಿಪ್‌ಗೆ ಹೋಗಲು ಮುಂದಾದಾಗ ಬಾಯ್‌ಫ್ರೆಂಡ್ ನಕಲಿ ಎಂಗೇಜ್‌ಮೆಂಟ್ ರಿಂಗ್ ಧರಿಸು ಎನ್ನುವ ವಿಚಿತ್ರ ಬೇಡಿಕೆಯೂ ಆಕೆಯ ಮುಂದೆ ಇಟ್ಟಿದ್ದಾನೆ. ಈ ವಿಚಿತ್ರ ಬೇಡಿಕೆಯ ಬಗ್ಗೆ ಕೇಳಿ ಯುವತಿಗೆ ಶಾಕ್ ಆಗಿದ್ದು ಇದು ಸರಿನಾ ಎನ್ನುವ ಪ್ರಶ್ನೆ ಆಕೆಯ ಮನಸ್ಸಿನಲ್ಲಿ ಮೂಡಿದ್ದು, ತನ್ನ ಬಾಯ್ ಫ್ರೆಂಡ್ ಮಾಡಿದ್ದು ಸರಿನಾ ಎಂದು ಸಲಹೆ ಕೇಳಿದ್ದಾಳೆ. ಆರ್/ ಐಟಿಎಎಚ್ (r/AITAH) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಈ ಮ್ಯಾಟರ್ ಹಂಚಿಕೊಂಡಿದ್ದಾಳೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರ ಸಲಹೆ ನೀಡಿದ್ದು ಒಬ್ಬ ಬಳಕೆದಾರ ನಕಲಿ ಉಂಗುರ ಧರಿಸುವ ಬಗ್ಗೆ ನಿಮ್ಮ ಕುಟುಂಬದೊಂದಿಗೆ ಚರ್ಚಿಸಿ. ನಿಮ್ಮ ಮನೆಯವರಿಗೆ ಆತನ ಬಗ್ಗೆ ಅಭಿಪ್ರಾಯ ಇರಬಹುದು. ಆದರೆ ಆತನ ವಿಚಿತ್ರ ಬೇಡಿಕೆಯೇ ಆ ವ್ಯಕ್ತಿಯ ವ್ಯಕ್ತಿತ್ವ ತೋರಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಈ ಸಂಬಂಧದ ಬಗ್ಗೆ ಹೆಚ್ಚು ನಂಬಿಕೆ ಇಡುವುದು ಒಳ್ಳೆಯದಲ್ಲ, ಸ್ವಲ್ಪ ಯೋಚಿಸಿ ಮುಂದುವರೆಯಿರಿ ಎಂದು ಸಲಹೆ ನೀಡಿದ್ದಾರೆ
