Home » BPL Card: ಬಿಪಿಎಲ್‌ ಕಾರ್ಡ್‌ದಾರರಿಗೆ ಸರಕಾರದಿಂದ ದಸರಾ ಶಾಕ್‌

BPL Card: ಬಿಪಿಎಲ್‌ ಕಾರ್ಡ್‌ದಾರರಿಗೆ ಸರಕಾರದಿಂದ ದಸರಾ ಶಾಕ್‌

0 comments

BPL Card: ಬಿಪಿಎಲ್‌ ಕಾರ್ಡ್‌ದಾರರಿಗೆ ಸರಕಾರ ದಸರಾ ಶಾಕ್‌ ನೀಡಿದೆ. ಉಚಿತವಾಗಿ ಪಡೆಯುತ್ತಿರುವ ಅನ್ನಭಾಗ್ಯ ಪಡಿತರ ಕಾರ್ಡ್‌ ಪರಿಷ್ಕರಣೆ ಮಾಡಿದೆ. ನೋಟಿಸ್‌ ಬೋರ್ಡ್‌ನಲ್ಲಿ ಕೃಷಿ ಇತ್ಯಾದಿ ಆದಾಯಗಳಿಂದಾಗಿ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ ಮೀರಿದೆ. ಹೀಗಾಗಿ ನಿಮ್ಮ ಪಡಿತರವನ್ನು ರದ್ದು ಮಾಡಲು ಮುಂದಾಗಿದ್ದು, ಕೊನೆಯ ಬಾರಿಗೆ ಪಡಿತರ ನೀಡಲಾಗುತ್ತಿದೆ. ಮುಂದಿನ ತಿಂಗಳಿನಿಂದ ಪಡಿತರ ನೀಡಲಾಗುವುದಿಲ್ಲ ಎಂದು ಉಲ್ಲೇಖ ಮಾಡಿ, ನೋಟಿಸ್‌ ಬೋರ್ಡ್‌ನಲ್ಲಿ ಅಂಟಿಸಲಾಗಿದೆ.

ಇದು ನೆಲಮಂಗಲ ತಾಲೂಕಿನಲ್ಲಿ ಸುಮಾರು 400 ಕ್ಕೂ ಹೆಚ್ಚು ಜನರಿಗೆ ಪಡಿತರ ಕಾರ್ಡ್‌ ಡಿಲೀಟ್‌ ಮಾಡಲು ಮುಂದಾಗಿದ್ದು, ಅಲ್ಲಿ ಈ ಘಟನೆ ನಡೆದಿದೆ.

ರಾಜ್ಯದಲ್ಲಿ ಬಡವರಿಗಿಂತ ಬಡತನ ರೇಖೆಗಿಂತ ಮೇಲಿದ್ದವರಿಗೆ ಹೆಚ್ಚಿನ ಪ್ರಮಾಣ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿತ್ತು. ಅದರಲ್ಲೂ ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಪಿಎಲ್‌ ಕಾರ್ಡ್‌ ಹಂಚಿಕೆ ಆಗಿತ್ತು. ಜಿಲ್ಲಾವಾರು ಬಡವರ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು ಕಾರ್ಡ್‌ಗಳ ಹಂಚಿಕೆ ಆಗಿತ್ತು. ಹೀಗಾಗಿ ಗ್ಯಾರಂಟಿ ಜಾರಿ ಮಾಡಿ ಕಂಗೆಟ್ಟಿದ್ದ ಸರಕಾರ ಬಿಪಿಎಲ್‌ ಕಾರ್ಡ್‌ ಪರಿಷ್ಕರಣೆಗೆ ಮುಂದಾಗಿದೆ.

ಇದನ್ನೂ ಓದಿ;Kanpura: ಮ್ಯಾಗಿ ಖರೀದಿಗೆಂದು ಅಕ್ಕನ ನಿಶ್ಚಿತಾರ್ಥ ಉಂಗುರ ಮಾರಾಟ ಮಾಡಲು ಹೊರಟ 13 ರ ಬಾಲಕ!

ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ವೈಟ್‌ ಬೋರ್ಡ್‌ 4 ಚಕ್ರದ ವಾಹನವಿದ್ದು, ಬಿಪಿಎಲ್‌ ಕಾರ್ಡ್‌ ಮಾಡಿಸಿದವರ ಕಾರ್ಡ್‌ ರದ್ದುಗೊಳ್ಳಲಿದೆ.

 

You may also like