Home » Ration Card: BPL ಕಾರ್ಡ್’ದಾರರೇ ಹುಷಾರ್ – ರೇಷನ್ ಕೊಂಡ ಮೇಲೆ ಈ ತಪ್ಪು ಮಾಡಿದ್ರೆ ರದ್ದಾಗುತ್ತೆ ನಿಮ್ಮ ಕಾರ್ಡ್!!

Ration Card: BPL ಕಾರ್ಡ್’ದಾರರೇ ಹುಷಾರ್ – ರೇಷನ್ ಕೊಂಡ ಮೇಲೆ ಈ ತಪ್ಪು ಮಾಡಿದ್ರೆ ರದ್ದಾಗುತ್ತೆ ನಿಮ್ಮ ಕಾರ್ಡ್!!

0 comments

 

Ration Card : ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ ಜನತೆಗೆ ಸರ್ಕಾರ ಆಗಾಗ ಕೆಲವು ನಿಯಮಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಆದರೂ ಕೂಡ ಕೆಲವು ಮೋಸಗಾರರ ಜಾಲ ಈ ನಿಯಮಗಳೆಲ್ಲವನ್ನು ಮೀರಿ ದುರ್ವರ್ತನೆ ತೋರುತ್ತಿದ್ದಾರೆ. ಇದೀಗ ಮತ್ತೆ ಸರ್ಕಾರ ಅವಸ ಆದೇಶವನ್ನು ಹೊರಡಿಸಿದ್ದು, ಕೊಂಡ ರೇಷನ್ ಅನ್ನು ನೀವು ಕಾಳ ಸಂತೆಯಲ್ಲಿ ಮಾರಿದರೆ ನಿಮ್ಮ ರೇಷನ್ ಕಾರ್ಡನ್ನು ರದ್ದು ಮಾಡಲು ಸೂಚನೆ ನೀಡಿದೆ.

 

ಹೌದು, ಅನೇಕರು ಅನರ್ಹರಾಗಿದ್ದರು ಕೂಡ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದಾರೆ. ಇಂಥವರು ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆದು ಅದನ್ನು ದುಡ್ಡಿಗಾಗಿ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ. ಹೀಗಾಗಿ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹ ಪಡಿತರ ಚೀಟಿ ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

 

ಇದರೊಂದಿಗೆ ಅಕ್ಟೋಬರ್ ತಿಂಗಳ ಕೊನೆಯವರೆಗೆ ಪ್ರತಿದಿನ ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟು ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಸರಿಯಾದ ಪ್ರಮಾಣದಲ್ಲಿ ಪಡಿತರ ವಿತರಿಸಬೇಕು. ಒಂದು ವೇಳೆ ಲೋಪ ದೋಷ ಕಂಡು ಬಂದಲ್ಲಿ ನ್ಯಾಯಬೆಲೆ ಅಂಗಡಿಯವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

You may also like