

ಬಳಂಜ: ಜಿಲ್ಲೆಯ ಹೆಸರಾಂತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜ ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿ ಸದಸ್ಯರು ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಡೆಯುವ ಹಿಂದೂ ಉತ್ಸವ ಕಾರ್ಯಕ್ರಮದ ಬೃಹತ್ ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಐದನೇ ಭಾರಿ ಕಾರ್ಯಕ್ರಮ ನೀಡುತ್ತಿರುವುದು ಹೆಮ್ಮೆಯಾಗಿದೆ. ಮಂಡಳಿಯ ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಅವರ ನೇತೃತ್ವದಲ್ಲಿ ಈಗಾಗಲೇ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು 350ಕ್ಕಿಂತಲೂ ಹೆಚ್ಚು ಭಜನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ
ಈ ಪ್ರಯಾಣದ ಶುಭ ಸಂದರ್ಭದಲ್ಲಿ ಮಂಡಳಿಯನ್ನು ಸದಾ ಪ್ರೋತ್ಸಾಹಿಸುವ ಜಗದೀಶ್ ಪೂಜಾರಿ ತಾರಿಪಡ್ಡು, ತೆಂಗಿನಕಾಯಿ ಹೊಡೆದು ನಮ್ಮ ಪ್ರಯಾಣಕ್ಕೆ ಶುಭಹಾರೈಸಿದರು.













