Home » ತನ್ನ ಬುದ್ಧಿ ಚುರುಕುಗೊಳಿಸಲು ಇನ್ನೊಬ್ಬನ ಮೆದುಳು ಮತ್ತು ಅಂಗಾಂಗಗಳನ್ನೇ ತಿಂದ ನರ ಭಕ್ಷಕ!!

ತನ್ನ ಬುದ್ಧಿ ಚುರುಕುಗೊಳಿಸಲು ಇನ್ನೊಬ್ಬನ ಮೆದುಳು ಮತ್ತು ಅಂಗಾಂಗಗಳನ್ನೇ ತಿಂದ ನರ ಭಕ್ಷಕ!!

by ಹೊಸಕನ್ನಡ
0 comments

ಪ್ರಪಂಚದಲ್ಲಿ ದಿನಕ್ಕೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಕೆಲವು ಘಟನೆಗಳು ಮೂಢನಂಬಿಕೆಯನ್ನು ಸಾರಿ ಹೇಳುತ್ತದೆ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.

ಬುದ್ಧಿ ಚುರುಕಾಗುತ್ತದೆ ಎಂದು ನಂಬಿದ ವ್ಯಕ್ತಿಯೊಬ್ಬ 70 ವರ್ಷದ ವೃದ್ಧನ ಹತ್ಯೆಗೈದು, ಆತನ ಮೆದುಳು ಮತ್ತು ಅಂಗಾಂಗಗಳನ್ನು ವ್ಯಕ್ತಿಯೋರ್ವ ಸೇವಿಸುವ ಮೂಲಕ ನರಭಕ್ಷಕನಂತೆ ವಿಕೃತ ಮೆರೆದಿರುವ ಘಟನೆ ಯುರೋಪ್‍ನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಡೇವಿಡ್ ಫ್ಲಾಗೆಟ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಜೇಮ್ಸ್ ಡೇವಿಡ್ ರಸ್ಸೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜೇಮ್ಸ್ ಡೇವಿಡ್ ರಸ್ಸೆಲ್ ಮನೆಯ ಆವರಣದಲ್ಲಿರುವ ವಾಹನದಲ್ಲಿ ಡೇವಿಡ್ ಫ್ಲಾಗೆಟ್ ಶವ ಪತ್ತೆಯಾಗಿದೆ. ಆತನ ಕೈ, ಕಾಲುಗಳನ್ನು ಟೇಪಿನಿಂದ ಕಟ್ಟಲಾಗಿದೆ. ಅಲ್ಲದೆ ಆತನ ದೇಹದ ಹಲವಾರು ಭಾಗಗಳು ನಾಪತ್ತೆಯಾಗಿದೆ.

ಮೊದಲಿಗೆ ಪೊಲೀಸರೊಂದಿಗೆ ವಾದ ಮಾಡಿದ ಜೇಮ್ಸ್ ಡೇವಿಡ್ ರಸ್ಸೆಲ್ ನಂತರ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಕುರಿತಂತೆ ಆರೋಪಿ ಮನೆಯನ್ನು ಪರಿಶೀಲಿಸುವ ವೇಳೆ ಮೈಕ್ರೋವೇವ್, ಬೌಲ್, ಡಫಲ್ ಬ್ಯಾಗ್ ಮತ್ತು ಚಾಕುವಿನ ಮೇಲೆ ರಕ್ತದ ಕಲೆ ಪತ್ತೆಯಾಗಿದೆ.

ಈ ಕೃತ್ಯ ಕುರಿತಂತೆ ಪ್ರತಿಕ್ರಿಯಿಸಿದ ತನಿಖಾಧಿಕಾರಿ, ಇದು ನಮ್ಮ ಆತ್ಮ ಸಾಕ್ಷಿಗೆ ದಕ್ಕೆಯನ್ನುಂಟು ಮಾಡಿದೆ. ರಸ್ಸೆಲ್‍ನ ಈ ವಿಕೃತ ಕೃತ್ಯ ಇಡಾಹೊ ರಾಜ್ಯದಲ್ಲಿಯೇ ಮೊದಲನೆಯದಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಆರೋಪಿ ರಸ್ಸೆಲ್ ವೃದ್ಧನ ಮಾಂಸವನ್ನು ತಿನ್ನುವುದರಿಂದ ತನ್ನ ಬುದ್ಧಿಯನ್ನು ಚುರುಕುಗೊಳಿಸಬಹುದು ಎಂದು ಭಾವಿಸಿ ಈ ಭಯಾನಕ ಕೃತ್ಯವೆಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

You may also like

Leave a Comment