Brazil Crime News: ಪತಿ ತನ್ನ 15 ವರ್ಷದ ತಂಗಿಯನ್ನು ಪುಸಲಾಯಿಸಿ ಕಾಮಕ್ಕೆ ಬಳಸಿಕೊಂಡ ಗಂಡನ (Husband)ವಿರುದ್ದ ಪತ್ನಿ( wife)ಸೇಡು ತೀರಿಸಿಕೊಂಡ ಘಟನೆ ಬ್ರೆಜಿಲ್ (Brazil)ನಲ್ಲಿ ವರದಿಯಾಗಿದೆ.
ಬ್ರೆಜಿಲ್ ನಲ್ಲಿ ವ್ಯಕ್ತಿಯೊಬ್ಬ ಪತ್ನಿಯ 15 ವರ್ಷದ ತಂಗಿಯನ್ನು (niece)ತನ್ನ ಕಾಮಕ್ಕೆ ಬಳಸಿಕೊಂಡಿದ್ದಾನೆ. ಈ ಕುರಿತು ಅನುಮಾನಗೊಂಡ ಪತ್ನಿ, ಒಂದು ದಿನ ರೆಡ್ಹ್ಯಾಂಡ್ ಆಗಿ ಪತಿಯ ಕಾಮದಾಟವನ್ನು ಬಹಿರಂಗಪಡಿಸಿದ್ದಾಳೆ. ಪತಿ ಹಾಗೂ ಪತ್ನಿ ಇಬ್ಬರು ಉದ್ಯೋಗ ಮಾಡುತ್ತಿದ್ದರಂತೆ. ಆದರೆ ಇತ್ತೀಚೆಗೆ ಪತಿಯ ವರ್ತನೆಗಳು ಅನುಮಾನ ಮೂಡಿಸಿದೆ. ಪತಿ ಕೆಲಸದಿಂದ ಬೇಗನೆ ಮನೆಗೆ ಬರುವುದು ಮಾತ್ರವಲ್ಲದೇ ದಿನ ಕೆಲಸಕ್ಕೆ ರಜೆ ಹಾಕುವುದನ್ನೂ ಕಂಡು ಶಂಕೆ ವ್ಯಕ್ತವಾಗಿದೆ. ಕೆಲಸಕ್ಕೆಂದು ತೆರಳಿದ ಪತಿಯನ್ನು ಹಿಂಬಾಲಿಸಿದ ಪತ್ನಿ ಆಶ್ಚರ್ಯಗೊಂಡಿದ್ದಾಳೆ.
ತನ್ನ 15 ವರ್ಷದ ತಂಗಿಯನ್ನು ಪುಸಲಾಯಿಸಿ, ಬೆದರಿಸಿ ಕಾಮಕ್ಕೆ ಬಳಸಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಒಂದು ದಿನ ತನ್ನ 15 ವರ್ಷದ ತಂಗಿ ಜೊತೆ ಮಲಗಿರುವಾಗಲೇ ಪತಿಯ ಕಾಮದಾಟವನ್ನು ಪತ್ತೆ ಹಚ್ಚಿದ ಪತ್ನಿ ಪತಿಯ ಎರಡು ಕೈ ಹಾಗೂ ಕಾಲುಗಳನ್ನು ಕಟ್ಟಿಹಾಕಿ ಪತಿ ಮನಬಂದಂತೆ ಥಳಿಸಿದ್ದಾಳೆ. ಇದಾದ ಬಳಿಕ, ಚಾಕು ತಂದ ಪತ್ನಿ ಪತಿಯ ಮರ್ಮಾಂಗವನ್ನು ಕತ್ತರಿಸಿ ನಂತರ ಮರ್ಮಾಂಗವನ್ನು ಟಾಯ್ಲೆಟ್ನಲ್ಲಿ ಬಿಸಾಡಿ ನೀರು ಹಾಕಿದ್ದಾಳೆ. ಪತಿಯ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಪತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಪತಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡು ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ.
