Hassan: ಮುಹೂರ್ತದ ಸಂದರ್ಭದಲ್ಲಿಯೇ ಮದುವೆ ಮುರಿದು ಬಿದ್ದ ಘಟನೆ ಹಾಸನದಲ್ಲಿ ನಡೆದಿದೆ.
ಈ ಘಟನೆ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ (ಮೇ 23) ಅಂದರೆ ಇಂದು ನಡೆದಿತ್ತು.
ಹಾಸನದ ಬೂವನಹಳ್ಳಿಯ ಯುವತಿ ಸ್ನಾತಕೋತ್ತರ ಪದವೀಧರೆ ಪಲ್ಲವಿ ಮತ್ತು ಆಲೂರು ತಾಲೂಕಿನ ಯುವಕ ಶಿಕ್ಷಕ ವೇಣುಗೋಪಾಲ್ ಮದುವೆ ಇಂದು (ಶುಕ್ರವಾರ) ನಿಗದಿಯಾಗಿತ್ತು. ತಾಳಿಕಟ್ಟುವ ಕೆಲ ಕ್ಷಣಗಳ ಮೊದಲು ವಧುವಿಗೆ ದೂರವಾಣಿ ಕರೆ ಬಂದಿದೆ. ಕೂಡಲೇ ನನಗೆ ಈ ಮದುವೆ ಬೇಡ ಎಂದು ಹಸೆಮಣೆ ಮೇಲಿಂದ ಯುವತಿ ಎದ್ದು ಕೊಠಡಿಗೆ ಹೋಗಿದ್ದಾಳೆ.
ಪೋಷಕರ ಮನವೊಲಿಕೆಯ ನಂತರೂ ಯುವತಿ ಮದುವೆಗೆ ಒಪ್ಪಲಿಲ್ಲ. ವರನ ಕಡೆಯವರೂ ಈ ಮದುವೆ ನಮಗೆ ಬೇಡ ಎಂದು ಹೊರಟರು. ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.
ಯುವತಿ ಪಲ್ಲವಿ ಬೇರೊಬ್ಬ ಯುವಕನನ್ನು ಪ್ರೀತಿ ಮಾಡುತ್ತಿದ್ದು, ಪ್ರಿಯಕರನ ಫೋನ್ ಬಂದ ಕೂಡಲೇ ಮದುವೆ ಬೇಡ ಎಂದು ಹೇಳಿ ಹಸೆಮಣೆಯಿಂದ ಎದ್ದೇಳಿದ್ದಾರೆ ಎನ್ನಲಾಗಿದೆ.
