Home » ಆಟವಾಡುತ್ತಾ 15 ಅಡಿ ಆಳದ ಚರಂಡಿಗೆ ಬಿದ್ದು ಪ್ರಾಣಬಿಟ್ಟ ಅಕ್ಕ-ತಮ್ಮ

ಆಟವಾಡುತ್ತಾ 15 ಅಡಿ ಆಳದ ಚರಂಡಿಗೆ ಬಿದ್ದು ಪ್ರಾಣಬಿಟ್ಟ ಅಕ್ಕ-ತಮ್ಮ

0 comments

ಮನೆಯ ಹೊರಾಂಗಣದಲ್ಲಿ ಜೊತೆಗೆ ಆಟವಾಡುತ್ತಿದ್ದ ಅಕ್ಕ, ತಮ್ಮ ಇಬ್ಬರು ಚರಂಡಿಗೆ ಬಿದ್ದು ಸಾವನ್ನಪಿರುವ ಹೃದಯ ವಿದ್ರಾವಕ ಘಟನೆ ಲಕ್ನೋದಲ್ಲಿ ನಡೆದಿದೆ.

ರುಬೀನಾ (9) ಹತ್ತು ತಿಂಗಳ ಕಿರಿಯ ಸಹೋದರ ಸುಮಿತ್ ಕುಮಾರ್ ಮೃತರಾಗಿದ್ದಾರೆ. ಇಬ್ಬರು ಆಟವಾಡುತ್ತಿದ್ದಾಗ ಅಲ್ಲೇ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಚರಂಡಿ ಸುಮಾರು 15 ಅಡಿ ಆಳವಿದ್ದುದರಿಂದ ಮಕ್ಕಳಿಬ್ಬರು ಸಾವನ್ನಪಿದ್ದಾರೆ.

ಬಿಹಾರದ ಸಮಸ್ತಿಪುರದ ನಿವಾಸಿ ಶಂಭು ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ಸಂಜೆ 4:30ಕ್ಕೆ ಹಿರಿಯ ಮಗಳು ರುಬೀನಾ, ಸುಮಿತ್ ಕುಮಾರ್‍ನ ಜೊತೆ ಮನೆ ಬಳಿ ಆಟವಾಡುತ್ತಿದ್ದರು. ಈ ವೇಳೆ ಇಬ್ಬರೂ ಅನುಮಾನಾಸ್ಪದವಾಗಿ ಚರಂಡಿಗೆ ಬಿದ್ದಿದ್ದಾರೆ.

ಮಕ್ಕಳಿಬ್ಬರು ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಅವರನ್ನು ಹುಡುಕತೊಡಗಿದಾಗ ಸುಮಾರು ಅರ್ಧ ಗಂಟೆಯ ನಂತರ ರುಬೀನಾ ಮತ್ತು ಅವಳ ಸಹೋದರ ಚರಂಡಿಯಲ್ಲಿ ಸಿಕ್ಕಿದ್ದಾರೆ. ಚರಂಡಿಯಿಂದ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

You may also like

Leave a Comment