8
Yadagiri: ರಾಜ್ಯದಲ್ಲಿ ಒಂದು ಮನಕಲುಕುವ ಘಟನೆ ನಡೆದಿದ್ದು ಹೃದಯಾಘಾತಕ್ಕೆ ಅಣ್ಣ-ತಮ್ಮ ಬಲಿಯಾಗಿದ್ದಾರೆ. ಈ ಮೂಲಕ ಇಬ್ಬರು ಸಹೋದರರು ಸಾವಿನಲ್ಲೂ ಒಂದಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಶಂಶೋದ್ದೀನ್ (42) ಇರ್ಫಾನ್ (38 ) ಎಂದು ಗುರುತಿಸಲಾಗಿದೆ. ಅಣ್ಣನಿಗೆ ಹೃದಯಾಘಾತ ಆಗಿರುವ ಸುದ್ದಿ ತಿಳಿದು ತಮ್ಮನಿಗೂ ಹೃದಯಾಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.
ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರು ಸಹೋದರರು ಸಾವನಪ್ಪಿದ್ದಾರೆ ಕೆಂಭಾವಿ ಪಟ್ಟಣದಲ್ಲಿ ಸಾವಿನಲ್ಲೂ ಸಹೋದರರು ಒಂದಾಗಿದ್ದಾರೆ. ಸಹೋದರರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಇದೀಗ ಇದೀಗ ಮುಗಿಲು ಮುಟ್ಟಿದೆ.
