Home » Murder : ಮನೆಯವರ ಎದುರೇ ಸಹೋದರಿಯನ್ನು ಕತ್ತು ಹಿಸುಕಿ ಕೊಂದೇ ಬಿಟ್ಟ ಪಾಪಿ – ಭಯಾನಕ ವಿಡಿಯೋ ವೈರಲ್ !!

Murder : ಮನೆಯವರ ಎದುರೇ ಸಹೋದರಿಯನ್ನು ಕತ್ತು ಹಿಸುಕಿ ಕೊಂದೇ ಬಿಟ್ಟ ಪಾಪಿ – ಭಯಾನಕ ವಿಡಿಯೋ ವೈರಲ್ !!

by ಹೊಸಕನ್ನಡ
1 comment

 

Murder: ನೋಡ ನೋಡುತ್ತಿದ್ದಂತೆ ಮನೆಯವರ ಎದುರೇ ತನ್ನ ಸಹೋದರಿಯನ್ನು ರಾಕ್ಷಸನೋರ್ವ ಕತ್ತು ಹಿಸುಕಿ ಕೊಂದ(Murder)ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಪಾಕಿಸ್ತಾನದ ಪಂಜಾಬ್(Panjab of Pakisthan) ಪ್ರಾಂತ್ಯದ ತೋಬಾ ಟೇಕ್ ಸಿಂಗ್ ನಗರದ ಮನೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದನ್ನು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾದ ಈ ಭಯಾನಕ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು ಭಾರೀ ವೈರಲ್ ಆಗ್ತಿದೆ. ಜೊತೆಗೆ ನೋಡುಗರಿಗೆ ನಡುಕ ಹುಟ್ಟಿಸುತ್ತಿದೆ.

https://twitter.com/Aadiiroy2/status/1773026194490810379?t=I7sMKRgQO763RPLl54nPDA&s=19

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ದುರುಳ ಸಹೋದರ 22 ವರ್ಷದ ಮಾರಿಯಾ ಎಂಬ ತನ್ನ ಸಹೋದರಿಯನ್ನು ಕತ್ತು ಹಿಸುಕಿ ಕೊಲ್ಲುವುದನ್ನು ನೋಡಬಹುದು. ಶಾಕಿಂಗ್ ವಿಚಾರ ಎಂದರೆ ಸಂತ್ರಸ್ತೆಯ ಅತ್ತಿಗೆ ಸೇರಿದಂತೆ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವ್ಯಕ್ತಿ ಈ ಕೃತ್ಯವನ್ನು ಎಸಗಿದ್ದಾನೆ. ಪಕ್ಕದಲ್ಲಿದ್ದ ಒಬ್ಬರೂ ಯಾರೂ ಪ್ರತಿಭಟಿಸಿದೆ, ಆತನನ್ನು ತಡೆಯದೇ ಏನೋ ಸಣ್ಣ ವಿಚಾರ ಎಂಬಂತೆ ಸುಮ್ಮನೆ ನಿಂತಿರುವುದು ನೋಡಿದರೆ ಎಂತವರಿಗೆ ದಂಗುಪಡಿಸುತ್ತೆ. ಅಷ್ಟೇ ಅಲ್ಲದೆ ಕೆಲಸ ಮುಗಿದ ಬಳಿಕ ಆತನ ತಂದೆ ಕುಡಿಯಲು ನೀರು ಕೊಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ !!

You may also like

Leave a Comment