1
Crime: ಕಲಬುರ್ಗಿ ಹೊರವಲಯದ ಪಟ್ನಾ ಗ್ರಾಮ ಬಳಿ ಮೂವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸಿದ್ಧಾರೂಢ (30), ಜಗದೀಶ (25) ಹಾಗೂ ರಾಮಚಂದ್ರ (35)ಮೃತ ದುರ್ದೈವಿಗಳಾಗಿದ್ದು, ಈರಣ್ಣ ತಾಳಿಕೋಟೆ, ರಾಜಣ್ಣ ಎಂಬುವವರು ಸೇರಿ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಾವನ್ನಪ್ಪಿದ ಮೂವರು ಡಾಬಾದಲ್ಲಿ ಕೆಲಸ ಮಾಡುತ್ತಿದ್ದು ಡಾಬಾಗೆ ನುಂಗಿ ಆ ಮೂವರನ್ನು ಕೊಲೆ ಮಾಡಲಾಗಿದೆ ಹಾಗೂ ಹಳೇ ವೈಶಾಮ್ಯದಿಂದ ಈ ಘಟನೆ ನಡೆದಿದೆ ಎಂದು ಇದೀಗ ಅನುಮಾನಕ್ಕೆ ಆಸ್ಪದ ಮಾಡಿಕೊಡುತ್ತಿದೆ.
